ಪುತ್ರಶೋಕ ನಿರಂತರ, ನಿಮ್ಮೊಂದಿಗೆ ನಾವಿದ್ದೇವೆ:
ಮೃತ ಪ್ರವೀಣ್ ತಾಯಿಗೆ ಶಾಸಕರ ಸಾಂತ್ವನ
ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಅವರು ಬೆಟ್ಟಂಪಾಡಿ ಗ್ರಾಮದ ಉಪ್ಪಳಿಗೆ ನಿವಾಸಿ ಪ್ರವೀಣ್ ನಾಯ್ಕ್ ಮನೆಗೆ ಭೇಟಿ ನೀಡಿ ಅವರ ತಾಯಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಅಪಘಾತದಲ್ಲಿ ಪುತ್ರನನ್ನು ಕಳೆದುಕೊಂಡಿದ್ದೀರಿ, ನಿಮ್ಮ ನೋವು ನಮಗೆ ಅರ್ಥವಾಗುತ್ತದೆ, ಪುತ್ರ ಶೋಖ ನಿರಂತರ ,ವಿಧಿಯನ್ನು ಯಾರೂ ತಡೆಯಲು ಸಾಧ್ಯವಿಲ್ಲ. ತಾಳ್ಮೆಯಿಂದ ಇರಿ ನಿಮ್ಮೊಂದಿಗೆ ನಾವಿದ್ದೇವೆ ಏನೇ ಸಹಾಯ ಬೇಕಾದರೂ ಬನ್ನಿ, ಸಹೋದರನ ಸ್ಥಾನದಲ್ಲಿ ನಿಂತು ನಿಮಗೆ ನೆರವಾಗುತ್ತೇನೆ ಎಂದು ಅವರು ಹೇಳಿದರು.

ಮೃತ ಪ್ರವೀಣ್ ತಾಯಿಗೆ ಸಾಂತ್ವನ ಹೇಳಿದ ಶಾಸಕರು ಆರ್ಥಿಕ ನೆರವು ನೀಡಿದರು. ಏನೇ ತೊಂದರೆಯಾದರೂ ನನ್ನ ಬಳಿ ಬನ್ನಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕೃಷ್ಣಪ್ರಸಾದ್ ಆಲ್ವ, ನವೀನ್ ರೈ ಚೆಲ್ಯಡ್ಕ, ಸದಾಶಿವ ರೈ ಗುಮ್ಮಟಗದ್ದೆ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.