ಸುಡಾನ್’ನಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ತುರ್ತು ಯೋಜನೆಗಳನ್ನು ರೂಪಿಸಿ- ಪ್ರಧಾನಿ ಮೋದಿ
ನವದೆಹಲಿ: ಸೇನೆ ಮತ್ತು ಅರೆಸೇನಾ ಪಡೆಗಳ ನಡುವಣ ಸಂಘರ್ಷದ ಪರಿಣಾಮ ಸುಡಾನ್ ಹಿಂಸಾಚಾರದಿಂದ ನಲುಗಿದ್ದು ಆ ರಾಷ್ಟ್ರದಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ತುರ್ತು ಯೋಜನೆಗಳನ್ನು ರೂಪಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮೋದಿ ಅವರು ಸುಡಾನ್‌ನ ಪರಿಸ್ಥಿತಿಯ ಕುರಿತು ಪರಾಮರ್ಶೆ ನಡೆಸಲು ಉನ್ನತ ಅಧಿಕಾರಿಗಳ ಜೊತೆಗೆ ವರ್ಚುವಲ್ ಸಭೆ ನಡೆಸಿದ್ದು ಮೂರು ಸಾವಿರಕ್ಕೂ ಅಧಿಕ ಭಾರತೀಯರ ಸುರಕ್ಷತೆ ಕುರಿತು ಚರ್ಚಿಸಿದ್ದಾರೆ.