ಕರಾವಳಿ

ಸುಳ್ಯ ತಾಲೂಕಿನಾದ್ಯಂತ ಸಂಭ್ರಮದ ಈದ್ ಉಲ್ ಫಿತ್ರ್ ಆಚರಣೆ



ಮುಸಲ್ಮಾನ ಬಾಂಧವರು ಪವಿತ್ರ ರಂಜಾನ್ ತಿಂಗಳ ಪೂರ್ತಿ 30 ದಿನಗಳು ಉಪವಾಸ ವೃತಾಚರಣೆಯನ್ನು ಆಚರಿಸಿ ‌ಶವ್ವಾಲ್ ತಿಂಗಳ ಪ್ರಥಮ ದಿನದಂದು ಈದ್ ಉಲ್ ಫಿತರ್ ಹಬ್ಬ ಆಚರಣೆಯನ್ನು ಆಚರಿಸುತ್ತಾರೆ.
ಇದರ ಅಂಗವಾಗಿ ಇಂದು ಸುಳ್ಯ ತಾಲೂಕಿನಾದ್ಯಂತ ಮುಸಲ್ಮಾನ ಬಾಂಧವರು ಈದುಲ್ ಫಿತರ್ ಹಬ್ಬವನ್ನು ಆಚರಿಸಿಕೊಂಡರು.

ತಾಲೂಕಿನ ಎಲ್ಲಾ ಜುಮಾ ಮಸೀದಿಗಳಲ್ಲಿ ಈದ್ ಹಬ್ಬದ ನಮಾಜ್ ಕಾರ್ಯಕ್ರಮವನ್ನು ಆಯಾ ಮಸೀದಿಗಳ ಖತೀಬರ ನೇತೃತ್ವದಲ್ಲಿ ನಡೆಯಿತು.
ಬಳಿಕ ಈದ್ ಸಂದೇಶವನ್ನು ನೀಡಿದ ಧಾರ್ಮಿಕ ಗುರುಗಳು ಸಮಾಜದಲ್ಲಿ ಸೌಹಾರ್ದತೆಯ ಬದುಕನ್ನು ಕಟ್ಟಲು ಪರಸ್ಪರ ಪ್ರೀತಿ ಮತ್ತು ವಿಶ್ವಾಸದಿಂದ ಜೀವನ ಸಾಗಿಸುವಂತೆ ಕರೆ ನೀಡಿದರು.

ತಂದೆ ತಾಯಿ, ಕುಟುಂಬದ ಸದಸ್ಯರು ಸೇರಿದಂತೆ ಊರಿನ ಇತರ ಧರ್ಮೀಯರೊಂದಿಗೆ ಐಕ್ಯತೆಯಿಂದ,ಸೌಹಾರ್ದ ತೆಯೊಂದಿಗೆ ಬಾಳಲು ಪ್ರತಿಯೊಬ್ಬರು ಕಟಿಬದ್ದರಾಗಬೇಕೆಂದು ಶಾಂತಿ ಸಂದೇಶವನ್ನು ನೀಡಿದರು. ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಸಂಭವಿಸುತ್ತಿರುವ ವಾಹನ ಅಪಘಾತಗಳಿಂದ ಉಂಟಾಗುವ ಮರಣಗಳು ಇವುಗಳಿಂದ ರಕ್ಷಣೆಹೊಂದಲು ಯುವ ಸಮೂಹ ಜಾಗೃತರಾಗಿ ಇರಬೇಕೆಂದು ಕೇಳಿಕೊಂಡರು.

ಸುಳ್ಯದ ಕೇಂದ್ರ ಜುಮಾ ಮಸೀದಿ ಗಾಂಧಿನಗರ, ಮೊಗರ್ಪಣೆ ಜುಮಾ ಮಸೀದಿ, ಬೆಳ್ಳಾರೆ ಝಕ್ರಿಯಾ ಜುಮಾ ಮಸೀದಿ, ಕಲ್ಲುಗುಂಡಿ ಜುಮಾ ಮಸ್ಜಿದ್, ಪೈಚಾರು ಸಲಫಿ ಜುಮಾ ಮಸೀದಿ ಸೇರಿದಂತೆ ತಾಲೂಕಿನ ವಿವಿಧ ಜುಮಾ ಮಸೀದಿಗಳಲ್ಲಿ ಸಂಭ್ರಮದ ಈದ್ ಆಚರಣೆ ನಡೆಯಿತು.ನಮಾಜ್ ಬಳಿಕ ಮುಸಲ್ಮಾನ ಬಾಂಧವರು ತಮ್ಮ ತಮ್ಮ ಕುಟುಂಬಸ್ಥರ ಮನೆಗಳಿಗೆ ತೆರಳಿ ಈದ್ ಶುಭಾಶಯಗಳನ್ನು ಹಂಚಿಕೊಂಡರು.

Leave a Reply

Your email address will not be published. Required fields are marked *

error: Content is protected !!