ಪುತ್ತೂರು: ಎಸ್.ಡಿ.ಪಿ.ಐ ಅಭ್ಯರ್ಥಿ ಶಾಫಿ ಬೆಳ್ಳಾರೆ ಪರವಾಗಿ ನಾಮಪತ್ರ ಸಲ್ಲಿಕೆ ಎ.19ರಂದು ನಡೆಯಲಿದೆ.
ಪಕ್ಷದ ಕಚೇರಿ ಬಳಿಯಿಂದ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಕೆ ಕಾರ್ಯ ನಡೆಯಲಿದೆ. ಶಾಫಿ ಬೆಳ್ಳಾರೆ ಅವರು ಜೈಲಿನಲ್ಲಿದ್ದು ಅವರ ಪರವಾಗಿ ಪಕ್ಷದ ಪ್ರಮುಖರು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ