ಕರಾವಳಿರಾಜಕೀಯ

RSS 100ನೇ ವರ್ಷದಲ್ಲಿ ಗ್ರಾಮ ಗ್ರಾಮದಲ್ಲಿ ಭಗವಧ್ವಜ ಹಾರಾಡಬೇಕು; ಗೋಮಾತೆ ರಾಷ್ಟೀಯ ಪ್ರಾಣಿ ಆಗಬೇಕು-ಪುತ್ತಿಲ



ಪುತ್ತೂರು: ನಮ್ಮ ಅನೇಕ ಕಾರ್ಯಕರ್ತರ ಮೇಲೆ ಕೇಸು, ರೌಡಿ ಲಿಸ್ಟ್‌ ಇದೆ. ಹಲವರ
ಮೇಲೆ 107 ಕೇಸು ದಾಖಲಾಗಿದೆ. ಲವ್ ಜಿಹಾದ್, ಮತಾಂತರದ ವಿರುದ್ಧ ನಡೆದ ಹೋರಾಟದಲ್ಲೂ ಅನೇಕ ಅಮಾಯಕರ ಮೇಲೆ ಪೊಲೀಸ್‌ ದೌರ್ಜನ್ಯ ಆಗಿದೆ. ಅದಕ್ಕೆಲ್ಲ ಶಾಶ್ವತ ಪರಿಹಾರ ಆಗಬೇಕು ಮತ್ತು ಅದರ ಕೂಗು ವಿಧಾನಸಭೆಯಲ್ಲಿ ಪ್ರತಿನಿಧಿಸಬೇಕೆಂಬ ಕಾರಣಕ್ಕಾಗಿ ನಾವೆಲ್ಲ ಇಲ್ಲಿ ಒಂದೇ ವೇದಿಕೆಯಲ್ಲಿ ಸೇರಿದ್ದೇವೆ. ಎಂದು ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಹೇಳಿದರು. ಪುತ್ತೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ಎ.12ರಂದು ಪುತ್ತೂರು ಕೊಟೆಚಾ ಹಾಲ್ ನಲ್ಲಿ ಬೆಂಬಲಿಗರು ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.

ಜನಪ್ರತಿನಿಧಿಗಳು ಅಧಿಕಾರದ ಮದದಲ್ಲಿ ಇರಬಾರದು. ಕಾರ್ಯಕರ್ತರ ನೋವಿಗೆ ಶಾಶ್ವತ ಪರಿಹಾರ ಬೇಕು. ಪ್ರಧಾನಿ ನರೇಂದ್ರ ಮೋದಿಯವರ ರಾಷ್ಟ್ರನಿರ್ಮಾಣದ ಆಶಯವನ್ನು ಸಾಕಾರಗೊಳಿಸವ ಪ್ರಯತ್ನ ಈ ಕ್ಷೇತ್ರದಿಂದ ಆಗಲಿ. ನಾನು ದಿನದ 24 ಗಂಟೆಯಲ್ಲಿ ಯಾವ ಸಂದರ್ಭದಲ್ಲೂ ನಿಮ್ಮ ಜೊತೆ ಇರುತ್ತೇನೆ ಎಂದು

ರಾಷ್ಟ್ರೀಯ ಸ್ವಯಂ ಸೇವಕ ಸಂಘದ 100ನೇ ವರ್ಷದಲ್ಲಿ ಗ್ರಾಮ ಗ್ರಾಮದಲ್ಲಿ ಭಗವಧ್ವಜ ಹಾರಾಡಬೇಕು. ಹಿಂದುತ್ವದಲ್ಲಿ ಗೋಮಾತೆ ರಾಷ್ಟೀಯ ಪ್ರಾಣಿ ಆಗಬೇಕು ಎಂದು ಅವರು ಹೇಳಿದರು.

ಕಾರ್ಯಕರ್ತರ ನೋವಿಗೆ ಶಾಶ್ವತ ಪರಿಹಾರ ಸಿಗಬೇಕು.
ಬಿಜೆಪಿಯ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಅವರು ದೂರವಾಣಿ ಮೂಲಕ ಸಂಪರ್ಕ ಮಾಡಿದ್ದಾರೆ. ಅವರ ಬಗ್ಗೆ ನಾನೇನೂ ಮಾತನಾಡುವುದಿಲ್ಲ. ಆದರೆ ಕಾರ್ಯಕರ್ತರ ಧ್ವನಿಯಾಗಿ ವಿಧಾನ ಸಭೆಯನ್ನು ಪ್ರತಿನಿಧಿಸುವ ಕೆಲಸ ಆಗಬೇಕಾಗಿದೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು.

Leave a Reply

Your email address will not be published. Required fields are marked *

error: Content is protected !!