ಸುಳ್ಯ :ಅಜ್ಜಾವರ ಬಳಿ ಕೆರೆಗೆ ಬಿದ್ದು ಒದ್ದಾಡುತ್ತಿರುವ ಮೂರು ಕಾಡಾನೆ
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ದೌಡು

ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ತುದಿಯಡ್ಕ ಎಂಬಲ್ಲಿ ತೋಟವೊಂದರ ಕೆರೆಗೆ ನಿನ್ನೆ ರಾತ್ರಿ ಮೂರು ಕಾಡಾನೆಗಳು ಬಿದ್ದು ಮೇಲೆ ಬರಲು ಸಾಧ್ಯವಾಗದೆ ಕೆರೆಯಲ್ಲಿ ಸಿಲುಕಿಕೊಂಡಿದೆ.
ಮೇಲೆ ಬರಲಾಗದೆ ಕೆರೆಯಲ್ಲೇ ಪರದಾಡುತ್ತಿದ್ದು, ಅರಣ್ಯ ಇಲಾಖಾ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿರುವುದಾಗಿ ತಿಳಿದು ಬಂದಿದೆ.
ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಆನೆಗಳ ಕಾಟ ಹೆಚ್ಚಾಗಿದ್ದು ಪರಿಸರದ ಕೃಷಿ ತೋಟಗಳನ್ನು ಹಾನಿ ಮಾಡುತ್ತಿದೆ ಎಂದು ತಿಳಿದು ಬಂದಿದೆ.