ಪ್ರಧಾನಿ ಮೋದಿಗೆ ಹುಲಿ ಕಾಣಿಸದ್ದಕ್ಕೆ ಕಾರಣ ತಿಳಿಸಿದ ಸಿಂಹ..!
ಮೈಸೂರು:ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಂಡೀಪುರದಲ್ಲಿ ಹುಲಿಗಳು ಯಾಕೆ ಕಾಣಿಸಿಲ್ಲ ಎಂಬುವುದಕ್ಕೆ ಸಂಸದ ಪ್ರತಾಪ ಸಿಂಹ ಸ್ಪಷ್ಟನೆ ನೀಡಿದ್ದಾರೆ.
ವಾಯುದಳದ ಮೂರು ಹೆಲಿಕಾಪ್ಟರ್‌ಗಳು ಏಕಕಾಲಕ್ಕೆ ಬಂದಿಳಿದಿದ್ದರಿಂದ ಉಂಟಾದ ಶಬ್ದದಿಂದಾಗಿ ಪ್ರಾಣಿಗಳು ದಟ್ಟ ಅರಣ್ಯದೊಳಗೆ ಹೋಗಿವೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಂಡೀಪುರದಲ್ಲಿ ಹುಲಿಗಳು ಕಾಣಿಸಿಲ್ಲ. ಈ ಸಾಮಾನ್ಯ ಜ್ಞಾನವೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಇಲ್ಲವೇ?’ ಎಂದು ಸಂಸದ ಪ್ರತಾಪ ಸಿಂಹ ಕೇಳಿದ್ದಾರೆ.