ಕಾಂಗ್ರೆಸ್ ಮುಖಂಡ, ನೆ.ಮುಡ್ನೂರು ಗ್ರಾ.ಪಂ ಮಾಜಿ ಅಧ್ಯಕ್ಷ ಮೇನಾಲ ಮಹಮ್ಮದ್ ಹಾಜಿ(ಮಿನಿ ಹಟ್ಟಾ) ನಿಧನ
ಪುತ್ತೂರು: ಈಶ್ವರಮಂಗಲ ಮೇನಾಲ ನಿವಾಸಿ ಮಹಮ್ಮದ್ ಹಾಜಿ(67.ವ) ಅವರು ಎ.10ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ನೆ.ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಐದು ಬಾರಿ ನೆ.ಮುಡ್ನೂರು ಗ್ರಾ.ಪಂ ಸದಸ್ಯರಾಗಿ ಆಯ್ಕೆಯಾಗಿದ್ದರು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದ ಇವರು ಅನೇಕ ಹುದ್ದೆಗಳನ್ನು ಅಲಂಕರಿಸಿದ್ದರು.
ಸುಮಾರು 10 ವರ್ಷ ಈಶ್ವರಮಂಗಲ ಮಸೀದಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಎಲ್ಲರೊಂದಿಗೂ ಆತ್ಮೀಯ ಒಡನಾಟ ಹೊಂದಿದ್ದರು. ಮಹಮ್ಮದ್ ಹಾಜಿಯವರು ಸ್ಥಳೀಯವಾಗಿ ‘ಮಿನಿ ಹಟ್ಟಾ’ ಎಂದೇ ಕರೆಯಲ್ಪಡುತ್ತಿದ್ದರು.
ಮೃತರು ಪತ್ನಿ ಬೀಫಾತಿಮಾ, ಪುತ್ರ ಗಲ್ಫ್ ಉದ್ಯೋಗಿ ಹಾಶಿಂ ಮೇನಾಲ, ಪುತ್ರಿಯರಾದ ಮಿಶ್ರಿಯಾ, ಖೈರುನ್ನಿಸಾ, ಹಬೀಬಾ, ಸಹೋದರರಾದ ಉದ್ಯಮಿ ಕಾಂಗ್ರೆಸ್ ಮುಖಂಡ ಅಬ್ದುಲ್ ರಹಿಮಾನ್ ಹಾಜಿ ಮೇನಾಲ ಹಾಗೂ ಸತ್ತಾರ್ ಮೇನಾಲ ಅವರನ್ನು ಅಗಲಿದ್ದಾರೆ.