ಮದರಸ ಪಬ್ಲಿಕ್ ಪರೀಕ್ಷೆ : ಪಾಟ್ರಕೋಡಿ ನೂರುಲ್ ಹುದಾ ಮದರಸ 100% ಫಲಿತಾಂಶದ ಸಾಧನೆ
ಪುತ್ತೂರು: ಇಸ್ಲಾಮಿಕ್ ವಿದ್ಯಾಭ್ಯಾಸ ಬೋರ್ಡ್ ನಡೆಸಿದ ಪಬ್ಲಿಕ್ ಪರೀಕ್ಷೆಯಲ್ಲಿ ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಪಾಟ್ರಕೋಡಿ ನೂರುಲ್ ಹುದಾ ಮದರಸ 100% ರ ಫಲಿತಾಂಶ ಪಡೆದುಕೊಂಡಿದೆ.
ಮದರಸದ 7ನೇ ಮತ್ತು 10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗಿ 100% ಫಲಿತಾಂಶ ಪಡೆದಿರುತ್ತಾರೆ. 5ನೇ ತರಗತಿಯಲ್ಲಿ 90% ಫಲಿತಾಂಶ ಬಂದಿರುತ್ತದೆ.
ಉತ್ತಮ ಫಲಿತಾಂಶ ಪಡೆಯಲು ಕಾರಣಕರ್ತರಾದ ಗುರುಗಳಾದ ಖಲಂದರ್ ಶಾಫಿ ಬಾಖವಿ ಅಲ್ ಮನಾನಿ, ಹನೀಫ್ ಸಖಾಫಿ, ಇಶಾಕ್ ಅಝ್ಹರಿ, ಮುನೀರ್ ಮದನಿ ಹಾಗೂ ತೇರ್ಗಡೆಯಾದ ಎಲ್ಲಾ ವಿದ್ಯಾರ್ಥಿಗಳನ್ನು ಜಮಾಅತ್ ಅಧ್ಯಕ್ಷರಾದ ಉಮ್ಮರ್ ಹಾಜಿ ಕರಿಮಜಲು ಹಾಗೂ ಜಮಾಅತ್ ಕಮಿಟಿ ಸದಸ್ಯರು ಹಾಗೂ ಗೌಸಿಯ ಯಂಗ್ ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷ ಅಝರ್ ಪಾಟ್ರಕೋಡಿ ಹಾಗೂ ಸಮಿತಿಯ ಸದಸ್ಯರು ಅಭಿನಂದಸಿದ್ದಾರೆ.
ವರದಿ:ಅಬ್ದುಲ್ ಖಾದರ್ ಪಾಟ್ರಕೋಡಿ