ತಿಂಗಳಾಡಿ: ನಾಪತ್ತೆಯಾಗಿದ್ದ ಯುವಕನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಪುತ್ತೂರು: ಯುವಕನೋರ್ವನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ತಿಂಗಳಾಡಿ ಸಮೀಪ ನಡೆದಿದೆ. ಕೆದಂಬಾಡಿ ಗ್ರಾಮದ ಗುತ್ತು ರಾಮಣ್ಣ ಗೌಡರ ಪುತ್ರ ಯಶವಂತ ಗೌಡ (32.ವ) ಡೆತ್ ನೋಟು ಬರೆದಿಟ್ಟು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು.

ವೃತ್ತಿಯಲ್ಲಿ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದು ಯಶವಂತ ಗೌಡರವರು ಕಳೆದ ಮೂರು ದಿನಗಳ ಹಿಂದೆ ತನ್ನ ಸ್ಕೂಟರ್ ಮನೆಯಲ್ಲಿ ನಿಲ್ಲಿಸಿ ಹೋಗಿದ್ದ ಮರಳಿ ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಮನೆಯವರು ಎಲ್ಲೆಡೆ ಹುಡುಕಾಟ ನಡೆಸಿದ್ದರು.
ಎ.7ರಂದು ಮನೆಯ ಸಮೀಪದ ಗುಡ್ಡದಲ್ಲಿ ಮರಕ್ಕೆ ನೈಲಾನ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಯಶವಂತ ಗೌಡರವರ ಮೃತದೇಹ ಪತ್ತೆಯಾಗಿದೆ. “ನನ್ನ ಸಾವಿಗೆ ನಾನೇ ಕಾರಣ, ತುಂಬಾ ಬೇಸರವಾಗುತ್ತಿದೆ. ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳು” ಎಂದು, ತಮ್ಮ ಮಹೇಶ್‌ಗೆ ಹೇಳಿದ ರೀತಿಯಲ್ಲಿ ಡೆತ್ ನೋಟು ಬರೆದಿಟ್ಟಿದ್ದಾರೆಎಂದು ತಿಳಿದು ಬಂದಿದೆ.
ಮೃತರು ತಂದೆ ರಾಮಣ್ಣ ಗೌಡ, ತಾಯಿ ಕಮಲ ಹಾಗೂ ಸಹೋದರ ಮಹೇಶ್‌ರವರನ್ನು ಅಗಲಿದ್ದಾರೆ. ಸ್ಥಳಕ್ಕೆ ಸಂಪ್ಯ ಠಾಣಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.