ಕರಾವಳಿ

ಪುತ್ತೂರು: ರೈಲಿನಿಂದ ಬಿದ್ದು ಮಹಿಳೆಗೆ ಗಾಯ



ಪುತ್ತೂರು: ಬೆಂಗಳೂರಿಗೆ ತೆರಳುತ್ತಿದ್ದ ರೈಲು ಪುತ್ತೂರು ರೈಲು ನಿಲ್ದಾಣದಲ್ಲಿ ನಿಂತು ತೆರಳುವ ಸಂದರ್ಭ ಮಹಿಳೆಯೊಬ್ಬರು ಬಿದ್ದು ಗಾಯಗೊಂಡ ಘಟನೆ .21 ರ ರಾತ್ರಿ ನಡೆದಿದೆ.

ಸಾಂದರ್ಭಿಕ ಚಿತ್ರ


ಬೆದ್ರಾಳ ನಿವಾಸಿ ಕುಸುಮ (42ವ) ಎಂಬವರು ಗಾಯಗೊಂಡವರು. ಅವರು ಪುತ್ರಿಯನ್ನು ಬೆಂಗಳೂರು ರೈಲಿಗೆ ಹತ್ತಿಸಲು ಪುತ್ತೂರು ರೈಲು ನಿಲ್ದಾಣದಕ್ಕೆ ಬಂದು ಪುತ್ರಿಯ ಲಗೇಜ್ ಗಳನ್ನು ರೈಲಿನ ಒಳಗಿಟ್ಟು ರೈಲಿನಿಂದ ಇಳಿಯುತ್ತಿದ್ದಂತೆ ರೈಲು ಸಂಚರಿಸಲಾರಂಭಿಸಿದಾಗ ಆಯ ತಪ್ಪಿ ಅವರು ಕೆಳಗೆ ಬಿದ್ದು ಕಾಲು ಮುರಿತಕ್ಕೊಳಗಾಗಿದ್ದಾರೆ. ಗಾಯಾಳುವನ್ನು ಜನಾರ್ದನ ಬೆಟ್ಟ ಸಹಿತಾ ಹಲವಾರು ಮಂದಿ ಸೇರಿಕೊಂಡು ಮಹಿಳೆಯನ್ನು ಪುತ್ತೂರು ಆಸ್ಪತ್ರೆಗೆ ಕಳುಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!