ಕಾವು ಹೇಮನಾಥ ಶೆಟ್ಟಿಗೆ ಎಐಸಿಸಿ ಯಿಂದ ತುರ್ತು ಬುಲಾವ್
ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಕಾವು ಹೇಮನಾಥ ಶೆಟ್ಟಿಯವರಿಗೆ ಎ.ಐ.ಸಿ.ಸಿಯಿಂದ ಬುಲಾವ್ ಬಂದಿದ್ದು ಇಂದು ಸಂಜೆ ದಿಢೀರ್ ದೆಹಲಿಗೆ ವಿಮಾನ ಹತ್ತಿದ್ದಾರೆ ಎಂದು ತಿಳಿದು ಬಂದಿದೆ.
ಪುತ್ತೂರಿನ ಅಭ್ಯರ್ಥಿ ಯಾರು ಎಂಬುದು ಇನ್ನೂ ಬಹಿರಂಗವಾಗಿಲ್ಲ. ಕೆಪಿಸಿಸಿಗೆ ಈ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಅವಕಾಶಕ್ಕಾಗಿ ಅರ್ಜಿ ಹಾಕಿದವರ ಸಂಖ್ಯೆ ಹೆಚ್ಚಾಗಿರುವುದು ಮತ್ತು ಆಯ್ಕೆ ಗೊಂದಲ ಉಂಟಾಗಿದೆ ಎನ್ನಲಾಗಿದೆ. ಈ ನಡುವೆ ದೆಹಲಿ ಎಐಸಿಸಿ ಕಚೇರಿಯಿಂದ ಬುಲಾವ್ ಬಂದಿರುವುದು ಕುತೂಹಲಕ್ಕೆಕಾರಣವಾಗಿದೆ
ಪುತ್ತೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಮಧ್ಯೆ ತೀವ್ರ ಪೈಪೋಟಿ ನಡೆಯುತ್ತಿರುವ ಮಧ್ಯೆ ಕಾವು ಹೇಮನಾಥ್ ಶೆಟ್ಟಿಯವರ ದೆಹಲಿ ಪ್ರಯಾಣ ಸಂಚಲನ ಮೂಡಿಸಿದೆ.