ಕರಾವಳಿ

ಬೀದಿ ಬದಿ ವ್ಯಾಪಾರಕ್ಕೆ ಅವಕಾಶ ಕೊಡಿ: ಸುಬ್ರಹ್ಮಣ್ಯ ನಿವಾಸಿಗಳಿಂದ ಶಾಸಕ ಅಶೋಕ್ ರೈಗೆ ಮನವಿ


ಪುತ್ತೂರು: ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ಕಳೆದ 10 ವರ್ಷಗಳಿಂದ ಬೀದಿ ವ್ಯಾಪಾರ ಮಾಡುತ್ತಿದ್ದ ನಮ್ಮನ್ನು ಕಳೆದ ಒಂದು ವರ್ಷದ ಹಿಂದೆ ವ್ಯಾಪಾರ ಮಾಡದಂತೆ ತಡೆಯಲಾಗಿದೆ ಎಂದು ಆರೋಪಿಸಿ ಮರಳಿ ಅವಕಾಶ ಮಾಡಿಕೊಡುವಂತೆ ವ್ಯಾಪಾರಿಗಳು ಶಾಸಕ ಅಶೋಕ್ ರೈ ಗೆ ಮನವಿ ಮಾಡಿದ್ದಾರೆ.


ಕಳೆದ 10 ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದ ನಮ್ಮನ್ನು ಏಕಾಏಕಿ ಎಬ್ಬಿಸಿದ್ದಾರೆ. ಇದರಿಂದ ನಮ್ಮ ಜೀವನಕ್ಕೆ ತೊಂದರೆಯಾಗಿದೆ.‌ ವಿವಿಧ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಶಾಸಕರಲ್ಲಿ ಅವಲತ್ತುಕೊಂಡರು.



ಒಂದು ತಿಂಗಳೊಳಗೆ ಅವಕಾಶ ಕೊಡಿ
ಶಾಸಕರ ಸೂಚನೆ: ಈ ಬಗ್ಗೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಜೊತೆ ಮಾತನಾಡಿದ ಶಾಸಕರು ಬೀದಿ ಬದಿ ವ್ಯಾಪಾರಕ್ಕೆ ಅವಕಾಶ ಕೊಡಿ. ಬೆಂಗಳೂರಿನಂತ ಮಹಾನಗರದಲ್ಲೂ ಬೀದಿ ವ್ಯಾಪಾರಿಗಳಿಗೆ ಅವಕಾಶ ನೀಡಲಾಗಿದೆ. ಜನರಿಗೆ ತೊಂದರೆಯಾಗದ ಸ್ಥಳದಲ್ಲಿ ಮತ್ತೆ ವ್ಯಾಪಾರಕ್ಕೆ ಅವಕಾಶ ಕೊಡಬೇಕು ಎಂದು ಸೂಚನೆ ನೀಡಿದರು.

Leave a Reply

Your email address will not be published. Required fields are marked *

error: Content is protected !!