ಟ್ರಾಫಿಕ್ ಜಾಮ್ ವೇಳೆ ಕಾರಿನಲ್ಲಿ ಪತ್ನಿಯನ್ನು ಬಿಟ್ಟು ನವ ವಿವಾಹಿತ ಪರಾರಿ
ಬೆಂಗಳೂರು: ವಾಹನಗಳ ದಟ್ಟಣೆಯಲ್ಲಿ ಸಿಲುಕಿದ್ದ ಕಾರಿನಲ್ಲಿ ಪತ್ನಿಯನ್ನು ಬಿಟ್ಟು ಪತಿ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

‘ಫೆ. 15ರಂದು ಮದುವೆಯಾಗಿದ್ದ ನವ ಜೋಡಿ ಪ್ರಾರ್ಥನಾ ಮಂದಿರಕ್ಕೆ ಹೋಗಿ ವಾಪಸು ಮನೆಗೆ ತೆರಳುತ್ತಿದ್ದರು. ಇದೇ ಸಂದರ್ಭದಲ್ಲಿ ಕಾರಿನಲ್ಲಿ ಪತ್ನಿ ಬಿಟ್ಟು ಪತಿ ಪರಾರಿಯಾಗಿದ್ದಾರೆ. ಈ ಸಂಬಂಧ ಪತ್ನಿ ಹಾಗೂ ಅವರ ಮನೆಯವರು ದೂರು ನೀಡಿದ್ದಾರೆ. ಅದನ್ನು ಆಧರಿಸಿ ತನಿಖೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಗೋವಾದಲ್ಲಿ ಕೆಲ ವರ್ಷ ವಾಸವಿದ್ದ ಯುವಕ, ಅಲ್ಲಿ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದರು ಎನ್ನಲಾಗಿದೆ.ಈ ವಿಷಯ ಅವರ ಮನೆಯವರಿಗೂ ಗೊತ್ತಿರಲಿಲ್ಲ. ಯುವಕನನ್ನು ಬೆಂಗಳೂರಿಗೆ ಕರೆಸಿದ್ದ ಕುಟುಂಬಸ್ಥರು, ಪರಿಚಯಸ್ಥ ಯುವತಿ ಜೊತೆ ಮದುವೆ ಮಾಡಿಸಿದ್ದರು.
ಈತನ್ಮಧ್ಯೆ ಗೋವಾದ ಯುವತಿ, ಯುವಕನ ಮೊಬೈಲ್‌ಗೆ ಕರೆ ಮಾಡಲಾರಂಭಿಸಿದ್ದರು. ಫೆ. 15ರಂದು ಕಾರಿನಲ್ಲಿ ಇರುವಾಗಲೇ ಯುವತಿ ಕರೆ ಬಂದಿದ್ದು ಇನ್ನೊಬ್ಬಳ ಜೊತೆಗಿನ ಪ್ರೀತಿ ವಿಷಯದ ಬಗ್ಗೆ ಪತ್ನಿಗೂ ಅನುಮಾನ ಬಂದಿತ್ತು. ಈ ಬಗ್ಗೆ ಪತ್ನಿ, ಪ್ರಶ್ನಿಸಿದ ಕಾರಣಕ್ಕೆ ಯುವಕ, ಕಾರಿನಿಂದ ಇಳಿದು ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.