ಪುತ್ತೂರು: ನೆಹರುನಗರ ಶ್ರೀ ಸಾಯಿ ವೆಲ್ಡಿಂಗ್ ವರ್ಕ್ಸ್ ಮಾಲಕ ಆತ್ಮಹತ್ಯೆ
ಪುತ್ತೂರು:ನೆಹರುನಗರ ಕಲ್ಲೇಗ ಶ್ರೀ ಸಾಯಿ ವೆಲ್ಡಿಂಗ್ ವರ್ಕ್ಸ್ ಮಾಲಕ ವಿಶ್ವಾಸ್ (40ವ) ಅವರು ಜು.28ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಕಲ್ಲೇಗ ಗಣೇಶ್ ಗಣೇಶ್ ಬಾಗ್ ನಿವಾಸಿಯಾಗಿದ್ದ ವಿಶ್ವಾಸ್ ಅವರು ಮನೆಯ ಬಳಿಯೇ ಶ್ರೀ ಸಾಯಿ ವೆಲ್ಡಿಂಗ್ ವರ್ಕ್ಸ್ ಉದ್ಯಮ ನಡೆಸುತ್ತಿದ್ದರು.ಮಧ್ಯಾಹ್ನದ ವೇಳೆ ಅವರು ಕಚೇರಿಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮೃತರು ಪತ್ನಿ, ಪುತ್ರಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.