ಸುಳ್ಯ: ಗಾಂಧಿನಗರ ಅನ್ಸಾರಿಯ ಕಾಂಪ್ಲೆಕ್ಸ್ ನಲ್ಲಿ ಕಾವು ಬದ್ರಿಯಾ ಮಜ್ಲೀಸ್ ‘ದಶ ವಾರ್ಷಿಕೋತ್ಸವದ’ ಪ್ರಚಾರ ಪತ್ರ ಬಿಡುಗಡೆ
ಪುತ್ತೂರು ತಾಲೂಕಿನ ಕಾವು ಪರಿಸರದಲ್ಲಿ ಕಾರ್ಯಾಚರಿಸುತ್ತಿರುವ ಬದ್ರಿಯಾ ಎಜು ಸೆಂಟರ್ ಇದರ ವತಿಯಿಂದ ಆಚರಿಸಲ್ಪಡುವ ಬದ್ರಿಯಾ ಮಜ್ಲೀಸ್ ದಶವಾರ್ಷಿಕ ಹಾಗೂ ಸನದು ದಾನ ಕಾರ್ಯಕ್ರಮ ಫೆಬ್ರವರಿ 22, 23ರಂದು ನಡೆಯಲಿದ್ದು ಇದರ ಪ್ರಚಾರ ಪತ್ರವನ್ನು ಸುಳ್ಯ ಗಾಂಧಿನಗರ ಅನ್ಸಾರ್ ಸಭಾಂಗಣದಲ್ಲಿ ಬಿಡುಗಡೆಗೊಳಿಸಲಾಯಿತು.

ಬದ್ರಿಯಾ ಎಜು ಸೆಂಟರ್ ಇದರ ಸ್ಥಾಪಕ ಅಧ್ಯಕ್ಷ ಸಯ್ಯಿದ್ ಫಕ್ರುದ್ದಿನ್ ಹದ್ದಾದ್ ತಂಙಳ್ ಪ್ರಚಾರ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿ ಫೆಬ್ರವರಿ 22, 23ರಂದು ನಡೆಯುವ ಕಾರ್ಯಕ್ರಮಗಳಲ್ಲಿ ದಶವಾರ್ಷಿಕ ಸನದುದಾನ ಮಹಾಸಮ್ಮೇಳನ, ಸಯ್ಯದ್ ಮೊಹಮ್ಮದ್ ಹದ್ದಾದ್ ತಂಙಳ್ ರವರ ನಾಲ್ಕನೇ ಆಂಡ್ ನೇರ್ಚೆ, ಹಾಗೂ ನೂತನ ಹಿಫುಲುಲ್ ಖುರಾನ್ ಮತ್ತು ದಹ್ವಾ ಸೆಂಟರ್ ಇದರ ಶಿಲಾನ್ಯಾಸ ನಡೆಯಲಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕೇಳಿಕೊಂಡರು.
ಈ ಸಂದರ್ಭದಲ್ಲಿ ತಂಙಳ್ ರವರಿಗೆ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಎಸ್ ಎಮ್ ಎ, ಎಸ್ ಎಸ್ ಎಫ್ ಸಂಘಟನೆಯ ಮುಖಂಡರುಗಳು ಶಾಲುಹೊದಿಸಿ ಸನ್ಮಾನಿಸಿದರು.

ಸಭಾ ಕಾರ್ಯಕ್ರಮದಲ್ಲಿ ಮುಖಂಡರುಗಳಾದ ಇಬ್ರಾಹಿಂ ಸಕಾಫಿ ಪುಂಡೂರು, ಅಬ್ದುಲ್ ಹಮೀದ್ ಬೀಜಕೊಚ್ಚಿ,ಹಾಜಿ ಎಸ್ಎಂ ಹಮೀದ್,ಲತೀಫ್ ಹರ್ಲಡ್ಕ,ಹಾಜಿ ಅಬ್ದುಲ್ ಖಾದರ್ ಪಾರೆ,ಅಬ್ದುಲ್ ಹಮೀದ್ ಸುಣ್ಣಮೂಲೆ, ಸಿದ್ದೀಕ್ ಕಟ್ಟೆಕಾರ್ಸ್,ನೌಶಾದ್ ಕೆರೆಮೂಲೆ ಹಾಗೂ ಇನ್ನಿತರ ಮುಖಂಡರುಗಳು ಸಂಘಟನೆಯ ಕಾರ್ಯಕರ್ತರುಗಳು ಉಪಸ್ಥಿತರಿದ್ದರು.