ಅಜ್ಮೀರ್ ಯಾತ್ರೆಯಲ್ಲಿದ್ದ ಸುಳ್ಯದ ಯುವಕ ಮೃತ್ಯು
ಅಜ್ಮೀರ್ ಯಾತ್ರೆಗೆ ತೆರಳಿದ್ದ ಸುಳ್ಯದ ವಿದ್ಯಾರ್ಥಿ ಕರಿಂಬಿಲ ನಿವಾಸಿ ಇಬ್ರಾಹಿಂ ಸಕಾಫಿ ಅವರ ಪುತ್ರ ಸಿದ್ದಿಕ್ ಅಲ್ ಮದಿನಿ ಎಂಬ ಯುವಕ ಉಸಿರಾಟದ ತೊಂದರೆಯಿಂದ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಪ್ರಸ್ತುತ ಕೇರಳದ ಕುಟ್ಯಾಡಿಯಲ್ಲಿ ಧಾರ್ಮಿಕ ವಿದ್ಯಾಭ್ಯಾಸವನ್ನು ಮಾಡುತ್ತಿದ್ದು ಸ್ನೇಹಿತರ ಜೊತೆಗೂಡಿ ಕಳೆದ ಎರಡು ದಿನಗಳ ಹಿಂದೆ ಅಜ್ಮೀರ್ ಜಿಯಾರತ ಟೂರ್ ಹೊರಟಿದ್ದರು ಎಂದು ತಿಳಿದುಬಂದಿದೆ. ಯಾತ್ರೆಯ ಸಂದರ್ಭದಲ್ಲಿ ಉಸಿರಾಟದ ಸಮಸ್ಯೆ ಉಂಟಾಗಿದ್ದು ಸ್ಥಳೀಯ ಆಸ್ಪತ್ರೆಗೆ ಅವರನ್ನು ದಾಖಲಿಸಿದ್ದಾರೆ.
ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತ ದೇಹ ಪುಣೆಯಲ್ಲಿ ಇದ್ದು ಮಂಗಳೂರಿಗೆ ತರುವ ಕಾರ್ಯಗಳು ನಡೆಯುತ್ತಿದೆ ಎಂದು ತಿಳಿದುಬಂದಿದೆ.





