ರಸ್ತೆಗೆ ಅಡ್ಡ ಬಂದ ಆನೆಗಳ ಹಿಂಡು, ಹೆದರಿ ಬೈಕಿನಿಂದ ಬಿದ್ದು ಸವಾರನಿಗೆ ಗಾಯ
ಸುಳ್ಯ: ಸುಳ್ಯ ಮಂಡೆಕೋಲು ರಸ್ತೆಯ ಡೆಂಜಿಗುರಿ ಎಂಬಲ್ಲಿ
ಶುಕ್ರವಾರ ರಾತ್ರಿ ಆನೆಗಳ ಹಿಂಡು ಕಾಣಸಿಕ್ಕಿದ್ದು, ಈ ರಸ್ತೆಯ ಮೂಲಕ ಬರುತ್ತಿದ್ದ ಬೈಕ್ ಸವಾರರೊಬ್ಬರು ಅತಂಕದಿಂದ ಬ್ರೇಕ್ ಹಾಕಿದ ಕಾರಣ
ಬಿದ್ದು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ತಾಜುದ್ದೀನ್ ಎಂಬುವರು ಸುಳ್ಯದಿಂದ ಮಂಡೆಕೋಲಿನ ಬೈಕ್‌ನಲ್ಲಿ ಹೋಗುತ್ತಿದ್ದು ಈ ವೇಳೆ ನಾಲ್ಕು ಆನೆಗಳಿದ್ದ ಹಿಂಡು ರಸ್ತೆಗೆ ಅಡ್ಡಲಾಗಿ
ಬಂದಿದೆ ಎನ್ನಲಾಗಿದೆ.
ಈ ವೇಳೆ ತಾಜುದ್ದೀನ್ ರವರು ಆತಂಕಗೊಂಡು ಬೈಕಿನ ಬ್ರೇಕ್ ಹಾಕಿದಾಗ ನಿಯಂತ್ರಣ ತಪ್ಪಿ
ಬಿದ್ದಿದ್ದಾರೆ. ಪರಿಣಾಮ ಕಾಲಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.