‘ಪುತ್ತೂರಿಗೆ ಪುತ್ತಿಲ’-ಟ್ವೀಟ್ ಅಭಿಯಾನ.!
ಪುತ್ತೂರು: ಹಿಂದೂ ಸ೦ಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರಿಗೆ ಬಿಜೆಪಿಯಿಂದ ಟಿಕೆಟ್ ನೀಡಬೇಕೆ೦ದು ಆಗ್ರಹಿಸಿ ಹಿಂದೂ ಸಂಘಟನೆಯೊಂದರ ಕಾರ್ಯಕರ್ತರು ಟ್ವಿಟ್ ಅಭಿಯಾನವನ್ನು ಜ.29ರಂದು ಆರಂಭಿಸಿದ್ದಾರೆ.

ಟ್ವೀಟ್ ಅಭಿಯಾನ ವ್ಯಕ್ತಿಯ ಪ್ರತಿಷ್ಠೆಗಾಗಿ ಅಥವಾ ಪ್ರಚಾರಕ್ಕಾಗಿ ಅಲ್ಲವೇ ಅಲ್ಲ,
ಕಾರ್ಯಕರ್ತರ ಬೇಡಿಕೆ ಮತ್ತು ಈ ನಾಯಕನಿಗೆ ಸಿಗಬೇಕಾದ ನ್ಯಾಯ ಮತ್ತು ಮನ್ನಣೆಗಾಗಿ
‘Puttila for Puttur’ ಎಂದು ಅಭಿಯಾನ ಆರಂಭಿಸಿದ್ದಾರೆ.
ಅರುಣ್ ಕುಮಾರ್ ಪುತ್ತಿಲ ಅವರನ್ನು ಬೆಂಬಲಿಸಿ ‘ಪುತ್ತೂರಿಗೆ ಪುತ್ತಿಲ’ ಎಂಬ ವಾಟ್ಸಪ್ ಗ್ರೂಪ್ ಆರಂಭಿಸಿ ಅದರ ಮೂಲಕ ಕಳೆದ ಹಲವು ದಿನಗಳಿಂದ ಚುನಾವಣೆ ಕುರಿತು ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಜ.29ರಿಂದ ಟ್ವೀಟ್ ಅಭಿಯಾನ ಆರಂಭಿಸಲಾಗಿದೆ.
ಈ ಅಭಿಯಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಅರುಣ್ ಕುಮಾರ್ ಪುತ್ತಿಲ ಅವರ ಬೆಂಬಲದ ಬಲ ತಲುಪುವಂತೆ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಪುತ್ತಿಲ ಪರ ಟ್ವೀಟ್ ಅಭಿಯಾನ ಪುತ್ತೂರು ಬಿಜೆಪಿ ವಲಯದಲ್ಲಿ ಸಂಚಲನ ಮೂಡಿಸಿದ್ದು ಕ್ಷೇತ್ರದಲ್ಲಿ ಚರ್ಚೆಗೆ ಗ್ರಾಸವಾಗಿದೆ.