ಕರಾವಳಿ

ಅಮ್ಚಿನಡ್ಕದಲ್ಲಿ ಕಾಡಾನೆ ಪ್ರತ್ಯಕ್ಷ: ಸಾರ್ವಜನಿಕರ ರಕ್ಷಣೆಗೆ ಕೋರಿ ಸಾಮಾಜಿಕ ಕಾರ್ಯಕರ್ತ ರಶೀದ್ ಅಮ್ಚಿನಡ್ಕರಿಂದ ಶಾಸಕರಿಗೆ ಮನವಿ



ಪುತ್ತೂರು: ಅಮ್ಚಿನಡ್ಕ ಪರಿಸರದಲ್ಲಿ ಮತ್ತೊಮ್ಮೆ ಕಾಡಾನೆ ಕಾಣಿಸಿಕೊಂಡಿದ್ದು ಕೃಷಿ ತೋಟಗಳಿಗೆ ನುಗ್ಗಿ ಹಾನಿ ಮಾಡಿರುವ ಬಗ್ಗೆ ವರದಿಯಾಗಿದೆ.

ಅಮ್ಚಿನಡ್ಕ ಪರಿಸರದಲ್ಲಿ ಆಗಾಗ ಕಾಡಾನೆ ಕಾಣಿಸಿಕೊಳ್ಳುತ್ತಿರುವುದರಿಂದ ಸ್ಥಳೀಯ ಜನತೆ ಆತಂಕಗೊಂಡಿದ್ದಾರೆ. ಈ ಬಗ್ಗೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ರಶೀದ್ ಅಮ್ಚಿನಡ್ಕ ಅವರು ಶಾಸಕ ಅಶೋಕ್ ಕುಮಾರ್ ಅವರಿಗೆ ಮನವಿ ಮಾಡಿದ್ದು ಅಮ್ಚಿನಡ್ಕ ಪರಿಸರದಲ್ಲಿ ಕಾಡಾನೆ ಆಗಾಗ ಕಾಣಿಸಿಕೊಳ್ಳುತ್ತಿದ್ದು ಇದರಿಂದ ಪರಿಸರದ ಜನತೆ ಭಯದಿಂದಲೇ ದಿನದೂಡಬೇಕಾದ ಪರಿಸ್ಥಿತಿ ಬಂದೊದಗಿದೆ, ಈ ನಿಟ್ಟಿನಲ್ಲಿ ತಾವು ಅಗತ್ಯ ಕ್ರಮ ವಹಿಸುವ ಮೂಲಕ ಭೀತಿಯಲ್ಲಿರುವ ಜನರಿಗೆ ಆತ್ಮಸ್ಥೈರ್ಯ ತುಂಬಬೇಕಾಗಿದೆ, ಕಾಡಾನೆಯನ್ನು ಇಲ್ಲಿಂದ ಓಡಿಸಲು ಅರಣ್ಯ ಇಲಾಖೆಯವರು ತರ್ತು ಕ್ರಮ ಕೈಗೊಳ್ಳಲು ತಾವು ಸೂಚಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಮನವಿಗೆ ಸ್ಪಂದಿಸಿದ ಶಾಸಕ ಅಶೋಕ್ ಕುಮಾರ್ ರೈಯವರು ತಕ್ಷಣವೇ ಸಂಬಂಧಪಟ್ಟ ಅರಣ್ಯ ಇಲಾಖೆಯವರ ಜೊತೆ ಮಾತನಾಡುತ್ತೇನೆ ಮತ್ತು ಆನೆಯನ್ನು ಪರಿಸರದಿಂದ ಓಡಿಸಲು ಕ್ರಮ ವಹಿಸುವಂತೆ ಸೂಚಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದು ರಶೀದ್ ಅಮ್ಚಿನಡ್ಕ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!