ಸುಳ್ಯ: ಪರಿವಾರಕಾನ ಬಳಿ 20 ಅಡಿ ಆಳಕ್ಕೆ ಬಿದ್ದ ಇನ್ನೋವಾ ಕಾರು..! ಒಬ್ಬರಿಗೆ ಗಂಭೀರ ಗಾಯ
ಸುಳ್ಯ ಪರಿವಾರಕಾನ ಬಳಿ ಜ.22 ರಂದು ರಾತ್ರಿ ಸುಮಾರು 12 ಗಂಟೆ ಸಮಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಇನ್ನೋವಾ ಕಾರು ಸುಮಾರು 20 ಅಡಿ ಆಳಕ್ಕೆ ಉರುಳಿದ ಘಟನೆ ವರದಿಯಾಗಿದೆ.

ಮಣಿಪಾಲ ಮೂಲದ ಸಮೃದ್ಧಿ ಸೊಸೈಟಿ ಸಂಸ್ಥೆಗೆ ಸೇರಿದ ಇನೋವಾ ಕಾರು ಮಡಿಕೇರಿಗೆ ತೆರಳಿ ಮರಳಿ ಮಣಿಪಾಲಕ್ಕೆ ಹೋಗುತ್ತಿದ್ದ ಪರಿವಾರಕಾನ ಸರ್ವಿಸ್ ಸ್ಟೇಷನ್ ಬಳಿ ಈ ಘಟನೆ ಸಂಭವಿಸಿ ಕಾರು ಉರುಳಿದ ಬಳಿಕ ಅಲ್ಲೇ ಪಕ್ಕದಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದು ಕಾರು ನಿಂತಿದೆ.
ಅಪಘಾತದಿಂದ ಕಾರಿನಲ್ಲಿದ್ದ ಓರ್ವರ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಉಳಿದವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಕ್ರೈನ್ ಮೂಲಕ ಕಾರನ್ನು ಮೇಲೆಕ್ಕೆತ್ತಲಾಗಿದೆ.