Uncategorized

ಚಲಿಸುತ್ತಿರುವ ಸ್ಕೂಟಿಯಲ್ಲಿ ರೊಮ್ಯಾನ್ಸ್‌, ಕಿಸ್ಸಿಂಗ್: ಜೋಡಿಯ ಹುಡುಕಾಟಕ್ಕೆ ಮುಂದಾದ ಪೊಲೀಸರು



ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿರುವ ಸಂದರ್ಭದಲ್ಲೇ ಜೋಡಿಯೊಂದು ರೊಮ್ಯಾನ್ಸ್‌ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಹಲವಾರು ವಾಹನಗಳು ಸಂಚರಿಸುವುದರ ನಡುವೆ
ಸ್ಕೂಟಿಯಲ್ಲಿ ಹೋಗುತ್ತಿರುವ ಜೋಡಿಯೊಂದು ರೊಮ್ಯಾನ್ಸ್‌ ಮಾಡಿಕೊಂಡು ಹೋಗುತ್ತಿರುವ ದೃಶ್ಯ ವೈರಲ್ ಆಗಿದ್ದು ಹುಡುಗಿ ಸ್ಕೂಟಿ ಸವಾರನನ್ನು ಅಪ್ಪಿಕೊಂಡು ಕಿಸ್ಸಿಂಗ್‌ ಮಾಡುತ್ತಿದ್ದಾಳೆ. ಇದನ್ನು ಇನ್ಯಾರೋ ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಆಗಿದೆ.

ವಿಡಿಯೋ ಪರಿಶೀಲಿಸಿದ ಬಳಿಕ ಇದು ಲಕ್ನೋದ ಹಜರತ್‌ಗಂಜ್ ಪ್ರದೇಶದಲ್ಲಿ ನಡೆದಿರುವುದು ಬೆಳಕಿಗೆ ಬಂದಿದ್ದು ಪೊಲೀಸರು ಜೋಡಿಯ ಹುಡುಕಾಟಕ್ಕೆ ಮುಂದಾಗಿದೆ ಎಂದು ತಿಳಿದು ಬಂದಿದೆ.

ಮೋಟಾರ್‌ ಕಾಯಿದೆ ನಿಯಮ ಉಲ್ಲಂಘನೆ ಹಾಗೂ ಆಶ್ಲೀಲತೆ ಪ್ರದರ್ಶಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!