ಬಂಟ್ವಾಳ: ಬಿಜೆಪಿ ಪ್ರಚಾರದ ವಾಹನ ಡಿಕ್ಕಿ- ಬೈಕ್ ಸವಾರ ದಾರುಣ ಸಾವು
ಬಿಜೆಪಿ ಪರ ಪ್ರಚಾರದ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ನಡೆದಿದೆ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ‘ಗ್ರಾಮ ವಿಕಾಸ’ ಯಾತ್ರೆಯ ಪ್ರಚಾರ ವಾಹನ ಮತ್ತು ಬೈಕ್ ಮಧ್ಯೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಯುವಕ ಮೃತಪಟ್ಟ ಘಟನೆ ಮೆಲ್ಕಾರ್ ಸಮೀಪದ ನಡೆದಿದೆ.
ಬೆಳ್ತಂಗಡಿ ಗುರುವಾಯನಕೆರೆ ನಿವಾಸಿ ವಿಜಿತ್ ಮೃತಪಟ್ಟವರು.
ಎರಡು ದಿನಗಳಿಂದ ಬಂಟ್ವಾಳದಲ್ಲಿ ನಡೆಯುತ್ತಿರುವ ಶಾಸಕ ರಾಜೇಶ್ ನಾಯ್ಕ್ ಅವರ ಪಾದಯಾತ್ರೆಯ ಪ್ರಚಾರ ಮಾಡುತ್ತಿದ್ದ ಜೀಪ್ ಮತ್ತು ಬೈಕ್ ಮಧ್ಯೆ ನರಹರಿ ತಿರುವಿನಲ್ಲಿ ಈ ಅಪಘಾತ ಸಂಭವಿಸಿದೆ.