ಕಾರಿನಡಿ ಸಿಲುಕಿದ್ದ ಯುವತಿಯನ್ನು ಎಳೆದೊಯ್ದ ಪ್ರಕರಣ: ಆರು ಆರೋಪಿಗಳು 14 ದಿನಗಳ ನ್ಯಾಯಾಂಗ ಬಂಧನಕ್ಕೆ
ದೆಹಲಿ: ಕಾರಿನಡಿ ಸಿಲುಕಿದ್ದ ಯುವತಿಯನ್ನು ಎಳೆದೊಯ್ದ ಪ್ರಕರಣದ ಆರು ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಜ.9ರಂದು ಆದೇಶ ನೀಡಿದೆ.
ಯುವತಿಯ ದೇಹವು ಕಾರಿನಡಿ ಸಿಲುಕಿದೆ ಎಂಬುವುದು ಆರೋಪಿಗಳಿಗೆ ಚಾಲನೆ ವೇಳೆ ತಿಳಿದಿತ್ತು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಸರ್ಕಾರ ಪರ ವಕೀಲರು ತಿಳಿಸಿದ್ದಾರೆ.
ಕಾರು ಸಾಗಿದ ರಸ್ತೆಯ ಸಿ.ಸಿ.ಟಿ.ವಿ ಕ್ಯಾಮರಾ ದೃಶ್ಯಗಳು ದೊರಕಿವೆ. ಸುಮಾರು 20 ಸಾಕ್ಷಿಗಳು ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಹೊಸ ಸಾಕ್ಷಿಯೊಬ್ಬರು ತನಿಖಾ ತಂಡದ ಜೊತೆ ಸೇರ್ಪಡೆಯಾಗಿದ್ದಾರೆ ಎಂದು ತನಿಖಾಧಿಕಾರಿ ಕೋರ್ಟ್ಗೆ ಮಾಹಿತಿ ನೀಡಿದ್ದಾರೆ.
ಜ.1ರಂದು ಅಂಜಲಿ ಸಿಂಗ್ (20) ಎಂಬ ಯುವತಿಯು ಚಾಲನೆ ಮಾಡುತ್ತಿದ್ದ ಸ್ಕೂಟಿಯು ಕಾರ್ಗೆ ಡಿಕ್ಕಿ ಹೊಡೆದಿತ್ತು. ಕಾರಿನಡಿ ಸಿಲುಕಿಕೊಂಡಿದ್ದ ಆಕೆಯನ್ನು ಆರೋಪಿಗಳು ಸುಮಾರು 12 ಕಿಮೀ ದೂರ ಎಳೆದುಕೊಂಡು ಹೋಗಿದ್ದರು.