ಕ್ರೀಡೆರಾಷ್ಟ್ರೀಯ

ವಿಶ್ವಕಪ್ ಕ್ರಿಕೆಟ್: ಟೀಮ್ ಇಂಡಿಯಾ ಸಂಭಾವ್ಯ ತಂಡ ಪ್ರಕಟ

ಭಾರತದಲ್ಲಿ ಅಕ್ಟೋಬರ್-ನವೆಂಬರ್ ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಕ್ರಿಕೆಟ್ ಗಾಗಿ ಬಿಸಿಸಿಐ ಸಿದ್ಧತೆ ಆರಂಭಿಸಿದ್ದು ಅದರ ಮೊದಲ ಭಾಗವಾಗಿ 20 ಆಟಗಾರರ ಪಟ್ಟಿ ಮಾಡಿದೆ.

ಮುಂಬರುವ ಏಕದಿನ ವಿಶ್ವಕಪ್ ಗಮನದಲ್ಲಿರಿಸಿ ಬಿಸಿಸಿಐ ಇಪ್ಪತ್ತು ಆಟಗಾರರನ್ನು ಫೈನಲ್ ಮಾಡಿದ್ದು, ಈ ಆಟಗಾರರಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ 16 ಆಟಗಾರರನ್ನು ಏಕದಿನ ವಿಶ್ವಕಪ್​ಗಾಗಿ ಆಯ್ಕೆ ಮಾಡಲಿದೆ. ಹೀಗಾಗಿ ಮುಂಬರುವ ಸರಣಿಗಳು ಟೀಮ್ ಇಂಡಿಯಾ ಆಟಗಾರರ ಪಾಲಿಗೆ ಮಹತ್ವದೆನಿಸಿಕೊಂಡಿದೆ.

ಈ ವರ್ಷ ಭಾರತ ತಂಡವು ಒಟ್ಟು 35 ಏಕದಿನ ಪಂದ್ಯಗಳನ್ನು ಆಡಲಿದೆ. ಈ ವೇಳೆ 20 ಆಟಗಾರರನ್ನು ಕಣಕ್ಕಿಳಿಸಿ ಪ್ರಯೋಗ ನಡೆಸಲಾಗುತ್ತದೆ.

ಭಾರತ ತಂಡವು ಐಸಿಸಿ ಟೂರ್ನಿ ಗೆದ್ದು ಬರೋಬ್ಬರಿ 9 ವರ್ಷಗಳೇ ಕಳೆದಿವೆ. ಕೊನೆಯ ಬಾರಿ ಟೀಮ್ ಇಂಡಿಯಾ 2013 ರಲ್ಲಿ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಗೆದ್ದಿತ್ತು. ಇದಾದ ಬಳಿಕ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ.

ಇದೀಗ ಭಾರತದಲ್ಲೇ ಏಕದಿನ ವಿಶ್ವಕಪ್ ನಡೆಯುತ್ತಿದ್ದು, ಹೀಗಾಗಿ ಈ ಸಲ ಕಪ್ ಗೆಲ್ಲಲು ಬಿಸಿಸಿಐ ವಿಶೇಷ ಯೋಜನೆಗಳನ್ನು ರೂಪಿಸುತ್ತಿದೆ.

20 ಸದಸ್ಯರ ಬಳಗದಲ್ಲಿ ಆಯ್ಕೆಯಾಗಿರುವ ಸಂಭಾವ್ಯ ಆಟಗಾರರ ಪಟ್ಟಿ ಈ ಕೆಳಗಿನಂತಿದೆ.

ರೋಹಿತ್ ಶರ್ಮಾ
ಶುಭ್ಮನ್ ಗಿಲ್
ವಿರಾಟ್ ಕೊಹ್ಲಿ
ಶ್ರೇಯಸ್ ಅಯ್ಯರ್
ಸೂರ್ಯಕುಮಾರ್ ಯಾದವ್
ಹಾರ್ದಿಕ್ ಪಾಂಡ್ಯ
ರವೀಂದ್ರ ಜಡೇಜಾ
ಅಕ್ಷರ್ ಪಟೇಲ್
ವಾಷಿಂಗ್ಟನ್ ಸುಂದರ್
ಇಶಾನ್ ಕಿಶನ್
ರಿಷಭ್ ಪಂತ್
ಕೆಎಲ್ ರಾಹುಲ್
ಸಂಜು ಸ್ಯಾಮ್ಸನ್
ಮೊಹಮ್ಮದ್ ಸಿರಾಜ್
ಯುಜ್ವೇಂದ್ರ ಚಹಾಲ್
ಕುಲ್ದೀಪ್ ಯಾದವ್
ಜಸ್ಪ್ರೀತ್ ಬುಮ್ರಾ
ಮೊಹಮ್ಮದ್ ಶಮಿ
ಅರ್ಷದೀಪ್ ಸಿಂಗ್
ಉಮ್ರಾನ್ ಮಲಿಕ್

Leave a Reply

Your email address will not be published. Required fields are marked *

error: Content is protected !!