ಕರಾವಳಿ

ಕಮ್ಯೂನಿಟಿ ಸೆಂಟರಿನ ಯೋಜನೆಗಳ ಸಾಕ್ಷ್ಯಚಿತ್ರ ಆಂದೋಲನ ಬಿಡುಗಡೆ



ಪುತ್ತೂರು: ಪ್ರತಿಭಾನ್ವಿತ ವಿದ್ಯಾರ್ಥಿಗಳ ಸಾಮರ್ಥ್ಯ, ಆಸಕ್ತಿ ಮತ್ತು ಕನಸನ್ನು ಅರಿತು ಅವರಿಗೆ ಸರಿಯಾದ ಮಾರ್ಗದರ್ಶನ, ಪ್ರೋತ್ಸಾಹ ನೀಡಿ ಗುರಿ ತಲುಪಿಸುವ ಗುರುವಿನ ಅಗತ್ಯತೆಯನ್ನು ಪುತ್ತೂರು ಕಮ್ಯೂನಿಟಿ ಸೆಂಟರ್ ಪರಿಣಾಮಕಾರಿಯಾಗಿ ಮಾಡಿದೆ ಎಂದು ಅನಿವಾಸಿ ಉದ್ಯಮಿ ಫಾರೂಕ್ ಪೊರ್ಟ್ ಫೊಲಿಯೋ ಹೇಳಿದರು.

ಪುತ್ತೂರು ಕಮ್ಯೂನಿಟಿ ಸೆಂಟರಿನ ಯೋಜನೆಗಳ ಸಾಕ್ಷ್ಯಚಿತ್ರ ಆಂದೋಲನವನ್ನು ಪುತ್ತೂರಿನ ಯುವ ಉದ್ಯಮಿಗಳ ಜೊತೆ ಸೇರಿ ಬಿಡುಗಡೆ ಮಾಡಿದ ನಂತರ ಅವರು ಮಾತನಾಡಿದರು.

ಆಂದೋಲನ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿದ ಅನಿವಾಸಿ ಉದ್ಯಮಿ ಅಶ್ರಫ್ ಷಾ ಮಾಂತೂರು ಮಾತನಾಡಿ  ನಮ್ಮ ಊರಿನ ಈ ಯೋಜನೆ ಈಗ ಎಲ್ಲರೂ ಮಾದರಿಯಾಗಿಸುತ್ತಿರುವುದು ತಿಳಿದು ಸಂತೋಷವಾಗಿದೆ ಎಂದರು.

ಅನಿವಾಸಿ ಉದ್ಯಮಿ ಪೈರೋಝ್ ಪರ್ಲಡ್ಕ ಮಾತನಾಡಿ, ಆರಂಭದಿಂದಲೂ ಇದೊಂದು ಮಹತ್ವಾಕಾಂಕ್ಷೆಯ ಪ್ರಯತ್ನ ಎಂದು ತಿಳಿದಿದ್ದೆ. ಇಂದು ಸಾಕ್ಷ್ಯಚಿತ್ರ ನೋಡಿದ ನಂತರ ಇದು ಸಮುದಾಯದ ಅಭಿವೃದ್ದಿಗೆ ಇರುವ ಅತ್ಯುತ್ತಮ ಪದ್ದತಿಯೆಂದು ಅರ್ಥವಾಗಿದೆ. ಕಮ್ಯೂನಿಟಿ ಸೆಂಟರ್ ವ್ಯವಸ್ಥಿತವಾದ ಪ್ರಗತಿಗೆ ಮಾದರಿ ಪದ್ದತಿ ನಿರ್ಮಿಸಿದ್ದು ಇದು ಎಲ್ಲೆಡೆ ಅನ್ವಯಿಸಬೇಕು ಎಂದರು.

ಅನಿವಾಸಿ ಉದ್ಯಮಿ ಮಹಮ್ಮದ್ ಹಾರಿಸ್ ಅರಂಡ ಮಾತನಾಡಿ, ದತ್ತಾಂಶ ಮತ್ತು ಪ್ರಗತಿಯ ವರದಿ ಅಧಿಕೃತ ಆಗಿರಬೇಕು. ಫಲಿತಾಂಶ ಇಲ್ಲದ ಪರಿಶ್ರಮ ಮತ್ತು ಹಣ ವ್ಯರ್ಥವಾಗಿದೆ. ಸಮುದಾಯದ ಬೇಡಿಕೆ ಮತ್ತು ಅಗತ್ಯತೆ ಕುರಿತು ವೈಜ್ಞಾನಿಕ ಅಧ್ಯಯನ ನಡೆಯಬೇಕು. ಅದಕ್ಕಾಗಿ ಕಮ್ಯೂನಿಟಿ ಸೆಂಟರ್ ಬುದ್ದಿಜೀವಿಗಳ-ಉಲೆಮಾಗಳ-ಚಿಂತಕರ ಮತ್ತು ವೃತ್ತಿಪರರ ಆಲೋಚನೆ ಸಂಗ್ರಹಿಸಿ ಸಮುದಾಯದ ಮುಂದಿಡುವ ಕೆಲಸ ಮಾಡಿದರೆ ನಾವೆಲ್ಲರೂ ಜೊತೆ ಇರುತ್ತೇವೆ ಎಂದರು.

ಅನಿವಾಸಿ ಉದ್ಯಮಿ ತಾಹಿರ್ ಸಾಲ್ಮರ ಮಾತನಾಡಿ ಬಹುದಿನಗಳ ಕನಸು ನನಸಾಗಿದೆ. ನಮ್ಮ ಊರಿನ ಎನ್.ಆರ್.ಐ ಉದ್ಯಮಿ, ಹಲವು ಸಂಘ ಸಂಸ್ಥೆಗಳ ಪೊಷಕರಾಗಿರುವ ಅಮ್ಜದ್ ಖಾನ್ ಪೊಳ್ಯರ ಸಾರಥ್ಯದಲ್ಲಿ,  ಹಲವು ದೂರದೃಷ್ಠಿಯ ವ್ಯಕ್ತಿತ್ವ ಇರುವ ತಂಡದ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಈ ಸೆಂಟರಿನಲ್ಲಿ ನಾವೆಲ್ಲರೂ ಜತೆಯಾಗಿ ದುಡಿದು ದೇಶಕ್ಕೆ ಕೊಡುಗೆ ಕೊಡುವ ಸಮುದಾಯವನ್ನು ಸೃಷ್ಟಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಮಹಮ್ಮದ್ ಕುಕ್ಕುವಳ್ಳಿ, ಅಶ್ರಫ್ ಮುಕ್ವೆ, ನಿಝಾಮ್ ಅರಂಡ, ಅಶ್ರಫ್ ಗೋಳಿಕಟ್ಟೆ, ಮಹಮ್ಮದ್ ಕಲಂದರ್,  ಸಿರಾಜುದ್ದೀನ್ ಪರ್ಲಡ್ಕ, ತಾಸಿರ್ , ವಕೀಲರಾದ ಶಾಕೀರ್ ಹಾಜಿ, ಇಸಾಕ್ ಕಡಬ,
ಪುತ್ತೂರಿನ ಯುವ ನಾಯಕರಾದ ರಿಯಾಝ್ ಪರ್ಲಡ್ಕ, ಹರ್ಷದ್ ದರ್ಬೆ, ಕಮ್ಯೂನಿಟಿ ರಿಸರ್ಚ್ ಎಂಡ್ ಡೆವಲಪ್ಪ್ ಮೆಂಟ್ ಫೌಂಡೇಶನ್ ನ ಉಪಾಧ್ಯಕ್ಷರಾದ ಅಬ್ದುಲ್ಲಾ ಶೇಕ್,  ಟ್ರಸ್ಟಿಗಳಾದ ಸತ್ತಾರ್ ವಲ್ತಡ್ಕ, ಮುನೀರ್ ವಿಟ್ಲ,  ನಝೀರ್ ಮುಂತಾದ ಗಣ್ಯರು ಭಾಗವಹಿಸಿದ್ದರು.  

ಇದೇ ಸಂದರ್ಭ ಅದ್ದು ಪಡೀಲ್ ಇವರ ಪುತ್ರ ರಾಮಕೃಷ್ಣ ಸ್ಕೂಲ್ ನ ವಿದ್ಯಾರ್ಥಿ  ಮಹಮ್ಮದ್ ಅನ್ಸಾರ್ ರವರು ಇತ್ತೀಚೆಗೆ ಮೂಡಬಿದ್ರೆ ಅಳ್ವಾಸ್ ನಲ್ಲಿ ನಡೆದ ಸ್ಕೌಟ್ಸ್ ಎಂಡ್ ಗೈಡ್ಸ್ ನಲ್ಲಿ ಅತ್ಯುತ್ತಮ ನಿರ್ವಹಣೆ ತೋರಿಸಿದ್ದಕ್ಕೆ ಸನ್ಮಾನಿಸಿ ಗೌರವಿಸಲಾಯಿತು.

ಸೆಂಟರಿನ ಪ್ರಧಾನ ಕಾರ್ಯದರ್ಶಿ ಹನೀಫ್ ಪುತ್ತೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಇಮ್ತಿಯಾಝ್ ಪಾರ್ಲೆ ಕಾರ್ಯಕ್ರಮ ನಿರ್ವಹಿಸಿದರು

Leave a Reply

Your email address will not be published. Required fields are marked *

error: Content is protected !!