ಪುಣಚ: ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ
ವಿಟ್ಲ: 8ನೇ ತರಗತಿ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೈದ ಘಟನೆ ಪುಣಚ ಗ್ರಾಮದ ಮಣಿಲದಿಂದ ವರದಿಯಾಗಿದೆ.

ಪುಣಚ ಗ್ರಾಮದ ಮಣಿಲ ರವೀಂದ್ರ ಗೌಡರ ಪುತ್ರ ಹೇಮಂತ್(14) ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.
ಹೇಮಂತ್ ಪುಣಚ ಶ್ರೀ ದೇವಿ ವಿದ್ಯಾಕೇಂದ್ರದ ಪ್ರೌಢಶಾಲೆಯಲ್ಲಿ 8ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಮನೆಯವರು ದೇವಸ್ಥಾನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹೋಗಿದ್ದ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಹೇಮಂತ್ ಪರೀಕ್ಷೆ ಇರುವ ಕಾರಣ ಓದಲು ಇದೆ, ಹಾಗಾಗಿ ದೇವಸ್ಥಾನಕ್ಕೆ ಬರುವುದಿಲ್ಲ ಎಂದು ಹೇಳಿ ಮನೆಯಲ್ಲಿಯೇ ಉಳಿದಿದ್ದ ಎನ್ನಲಾಗಿದೆ. ಮನೆ ಮಂದಿ ವಾಪಾಸ್ ಮನೆಗೆ ಬಂದಾಗ ಹೇಮಂತ್ ಆತ್ಮಹತ್ಯೆಗೆ ಶರಣಾಗಿದ್ದರು.