ಕರಾವಳಿ

ಮರಣ ಹೊಂದಿದವರ ಪಟ್ಟಿ ತಯಾರಿಸಿ ಮಯ್ಯತ್ ನಮಾಜ್ ನಿರ್ವಹಿಸಲು ವಿನಂತಿಸಿ ಪ್ರಚಾರ: ನಾಲ್ಕು ವರ್ಷಗಳಿಂದ ಪುಣ್ಯದ ಕಾರ್ಯ ಮಾಡುತ್ತಿರುವ ಗಲ್ಫ್ ಉದ್ಯೋಗಿ



ಮೊಬೈಲ್ ಬಂದ ಬಳಿಕ ಜರಿಗೆ ಎಲ್ಲವೂ ಹತ್ತಿರವಾಗಿದೆ. ಇತ್ತೀಚಿನ ವರ್ಷಗಳಿಂದ ಸಾಮಾಜಿಕ ಜಾಲತಾಣ ಬಲಿಷ್ಠವಾಗಿದೆ. ಯಾವುದೇ ಸುದ್ದಿಗಳು ಜಾಲತಾಣದಲ್ಲಿ ಬಂದರೂ ಜನ ಅದನ್ನು ಅಷ್ಟು ಬೇಗನೆ ನಂಬುತ್ತಿಲ್ಲ ಇದಕ್ಕೆ ಕಾರಣ ಸುಳ್ಳು ಸುದ್ದಿಗಳೇ ಜಾಲತಾಣದಲ್ಲಿ ಹರಿದಾಡುತ್ತಿರುವುದು. ಮೊಬೈಲ್ ಸದ್ಬಳಕೆಯಷ್ಟೆ ದುರ್ಬಳಕೆಯೂ ಅಗುತ್ತಿದೆ.


ಆದರೆ ಇಲ್ಲೋರ್ವರು ಸಾಮಾಜಿಕ ಜಾಲತಾಣವನ್ನು ಪುಣ್ಯದ ಕಾರ್ಯಕ್ಕೆ ವಿನಿಯೋಗಿಸಿ ಸದ್ದಿಲ್ಲದೇ ಸುದ್ದಿಯಾಗಿದ್ದಾರೆ.

ಮರಣ ಹೊಂದಿದ ವ್ಯಕ್ತಿಗಳ ಪಟ್ಟಿ ತಯಾರಿಸಿ ಅವರಿಗಾಗಿ ಮಯ್ಯತ್ ನಮಾಜ್ ನಿರ್ವಹಿಸುವಂತೆ ವಿನಂತಿಸಿ ವ್ಯಕ್ತಿಯೋರ್ವರು ಅನೇಕ ಸಮಯಗಳಿಂದ ಪ್ರಚಾರ ಕಾರ್ಯ ನಿರ್ವಹಿಸುತ್ತಿದ್ದು ಈಗಲೂ ಅದನ್ನು ಮುಂದುವರಿಸಿದ್ದಾರೆ.

ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಕೊಡಿಪ್ಪಾಡಿಯವರಾಗಿದ್ದು ಗಲ್ಫ್ ಉದ್ಯೋಗಿಯಾಗಿರುವ ಮಹಮ್ಮದ್ ಶರೀಫ್ ಪಾಲತ್ತೂರು ಅವರು ನಾಲ್ಕು ವರ್ಷಗಳ ಹಿಂದೆ ‘ಮಯ್ಯತ್ ನಮಾಜ್’ ಎಂಬ ವಾಟ್ಸಪ್ ಗ್ರೂಪ್ ರಚಿಸಿ ಆ ಗ್ರೂಪ್ ನಲ್ಲಿ ಹಲವಾರು ಸ್ನೇಹಿತರನ್ನು ಹಾಗೂ ಮಸೀದಿ ಖತೀಬರನ್ನು ಸೇರಿಸಿ ಅವರ ಮೂಲಕ ಮರಣ ಹೊಂದಿದ ವ್ಯಕ್ತಿಗಳ ಹೆಸರು ವಿಳಾಸವನ್ನು ಪಡೆದು ಶುಕ್ರವಾರದ ದಿನ ಆ ಎಲ್ಲಾ ಹೆಸರುಗಳನ್ನು ಸೇರಿಸಿ ಒಂದು ಪಟ್ಟಿಯನ್ನು ಮಾಡಿ ಮಯ್ಯತ್ ನಮಾಜ್ ಗ್ರೂಪ್ ಹಾಗೂ ಇನ್ನೂ ಹಲವಾರು ಗ್ರೂಪ್ ಗಳಗೆ ಶೇರ್ ಮಾಡಿ ಹಲವಾರು ಮಸೀದಿಗಳಲ್ಲಿ ಮಯ್ಯತ್ ನಮಾಜ್ ನಿರ್ವಹಿಸಲು ವಿನಂತಿ ಮಾಡುತ್ತಿದ್ದಾರೆ.


ಇವರು ಇದನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದು ಮರಣ ಹೊಂದಿದ ವ್ಯಕ್ತಿಗಳ ಹೆಸರು, ಊರು ಸಹಿತ ವಾಟ್ಸಾಪ್ ಗ್ರೂಪ್ ಗಳಿಗೆ ರವಾನಿಸುತ್ತಾರೆ.
ಇವರ ಈ ಕಾರ್ಯಕ್ಕೆ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಮರಣ ಹೊಂದಿದವರಿಗೆ ನಾವು ನೀಡಬಹುದಾದ ಅತೀ ದೊಡ್ಡ ಕಾಣಿಕೆ ಎಂದರೆ ನಾವು ಅವರಿಗಾಗಿ ಮಾಡುವ ಮಯ್ಯತ್ ನಮಾಜ್ ಎನ್ನುವ ಮಹಮ್ಮದ್ ಶರೀಫ್ ಅವರು ಮರಣ ಹೊಂದಿದವರ ಹೆಸರು ಪ್ರಕಟಿಸಿ ಮಯ್ಯತ್ ನಮಾಜ್ ನಿರ್ವಹಿಸಲು ವಿನಂತಿಸಿ ಪ್ರಚಾರಪಡಿಸುವುದು ಪುಣ್ಯದ ಕಾರ್ಯ ಎನ್ನುವ ನೆಲೆಯಲ್ಲಿ ನಾನಿದನ್ನು ಮಾಡುತ್ತಾ ಬಂದಿದ್ದೇನೆ ಎಂದು ತಿಳಿಸಿದ್ದಾರೆ.

✍🏻 ಅಬ್ದುಲ್ ಖಾದರ್ ಪಾಟ್ರಕೋಡಿ

Leave a Reply

Your email address will not be published. Required fields are marked *

error: Content is protected !!