Uncategorized

ಪುತ್ತೂರು| ಗಡಿಪಾರು ವ್ಯಕ್ತಿಯ ವಿಚಾರದಲ್ಲಿ ತಪ್ಪು ಮಾಹಿತಿ ಹರಡಿದ ಆರೋಪ; ಓರ್ವನ ವಿರುದ್ದ ಪ್ರಕರಣ ದಾಖಲು

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯ ವ್ಯಕ್ತಿಯೋರ್ವನ ಗಡಿಪಾರಿಗೆ ಸಂಬಂಧಿಸಿದ ವಿಚಾರದಲ್ಲಿ ವಾಟ್ಸ್ ಆಪ್ ಮೂಲಕ ತಪ್ಪು ಮಾಹಿತಿ ಮತ್ತು ಸ್ಥಳೀಯ ಆಡಳಿತಕ್ಕೆ ಅಪರಾಧಿಕ ಭಯ ಹುಟ್ಟಿಸಿದ ಆರೋಪದಲ್ಲಿ ಓರ್ವನ ವಿರುದ್ಧ ಪ್ರಕರಣ ದಾಖಲಾಗಿದೆ.

Oplus_131072

  ಕಬಕ ಗ್ರಾಮದ ಗಣೇಶ್ ಪ್ರಸಾದ್ ಎಂಬಾತನು ಉದ್ದೇಶಪೂರ್ವಕವಾಗಿ ಸಾರ್ವಜನಿಕರಿಗೆ ಗಾಳಿ ಸುದ್ದಿಯನ್ನು ಹರಡುತ್ತಾ ಹಾಗೂ ಸ್ಥಳಿಯ ಆಡಳಿತಕ್ಕೆ ಭಯ ಹಾಗೂ ಅಪರಾಧಿಕ ಬೆದರಿಕೆಯನ್ನೊಡ್ಡಿರುವ ಕಾರಣ ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ಆರೋಪಿಯ ವಿರುದ್ದ ಪುತ್ತೂರು ನಗರ  ಪೊಲೀಸ್ ಠಾಣೆಯಲ್ಲಿ ಅ ಕ್ರ: 41/2025 ಕಲಂ: 353(1), (b),  351(3) BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದು, ಮುಂದಿನ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!