ಎಲ್ಲರಂತಲ್ಲ ನೌಶಾದ್ ಹಾಜಿ…ಸಂಘಟನಾ ಕಾರ್ಯಾಚರಣೆಯಲ್ಲಿ ಅವರೊಬ್ಬ ರೋಲ್ ಮಾಡೆಲ್
✍🏻 ರಶೀದ್ ಬಿ.ಕೆ
ನೌಶಾದ್ ಹಾಜಿ ಅಪ್ರತಿಮ ಸಂಘಟನಾ ಪ್ರಮುಖರಾಗಿದ್ದರು. ಖ್ಯಾತ ಸಮಾಜ ಸೇವಕರಾಗಿದ್ದರು. ಕರುಣಾಮಯಿ ಹೃದಯಿಯಾಗಿದ್ದರು.ಅವರು ಹೆಸರು, ಸ್ಟೇಜ್, ಪೇಜ್, ಫೋಟೋಗಳಿಗಾಗಿ ತನ್ನ ಕೆಲಸಗಳನ್ನು ಮಾಡುತ್ತಿರಲಿಲ್ಲ. ಅದಕ್ಕಾಗಿ ಅವರ ಶುಭ್ರ ಮನಸ್ಸು ಪೈಪೋಟಿ ನಡೆಸುತ್ತಿರಲ್ಲಿಲ್ಲ.

ನಿಯ್ಯತ್ತಿನ ಕೆಲಸಕ್ಕೆ ಗೆಲುವು ಖಂಡಿತಾ…ನಿಸ್ವಾರ್ಥ ಸೇವೆಯನ್ನು ಜನ ಗುರುತಿಸಿಯೇ ತೀರುತ್ತಾರೆ ಎಂಬುವುದಕ್ಕೆ ನೌಷಾದ್ ಹಾಜಿ ಸೂರಲ್ಪಾಡಿಯವರ ಜನಾಝ ನೋಡಲು ಸೇರಿದ ಜನಸ್ತೋಮವೇ ಸಾಕ್ಷಿ…
ಎಲ್ಲವೂ ನಿಯ್ಯತ್ತಿನ ಮೇಲೆ ಸೀಮಿತವಾಗಿರುತ್ತಿತ್ತು.
ಪತ್ರಿಕೆಗಳಲ್ಲಿ ಹೆಸರು ಬರದೇ ಇದ್ದಾಗ ಅಥವಾ ಕೊನೆಗೆ ಬಂದಾಗ ಸಿಟ್ಟು ತೋರಿಸಿದ ಜಾಯಾಮಾನ ಅವರಲ್ಲಿರಲಿಲ್ಲ. ಎಲ್ಲರೂ ನನ್ನ ಅಭಿಪ್ರಾಯವನ್ನೇ ಮನ್ನಿಸಿ ಅದರಂತೆ ಕಾರ್ಯಾಚರಿಸಬೇಕೆಂಬ ದುಷ್ಟ ಚಿಂತೆ ಅವರಲ್ಲಿರಲಿಲ್ಲ. ಲೀಡರ್ ಆದರೆ ಸಣ್ಣಪುಟ್ಟ ಕೆಲಸ ಮಾಡುವುದು ಉಚಿತವಲ್ಲ ಎಂಬ ನಂಬಿಕೆ ಅವರಿಗಿದ್ದಿಲ್ಲ.
ನೌಶಾದ್ ಹಾಜಿ ಬಹಳಷ್ಟು ಚಿಂತಿಸುತ್ತಿದ್ದರು. ಅದರಂತೆ ಕಾರ್ಯಾಚರಣೆ ನಡೆಸುತ್ತಿದ್ದರು. ತನ್ನ ಚಿಂತಾಮಂಡಲದಿಂದ ಉದಿಸಿದ ವಿನೂತನ ಸಂಘಟನಾ ತಂತ್ರಗಾರಿಕೆಗಳನ್ನು ಅದು ತನ್ನದೆಂದು ತೋರಿಸದೆ ಅದರ ಯಶಸ್ಸನ್ನು ಮಾತ್ರ ಹೈಲೈಟಾಗಿಸುವತ್ತ ಚಿಂತಿಸುತ್ತಿದ್ದ ವಿಶಿಷ್ಟ ವ್ಯಕ್ತಿಯಾಗಿದ್ದರು. ಯಾರ್ಯಾರದೋ ಚಿಂತನೆಯನ್ನು ತನ್ನ ಐಡಿಯಾವೆಂದು ಡಂಗುರ ಸಾರುವ ಇಂದಿನ ಸಂಘಟನಾ ರಂಗಕ್ಕೆ ಅವರೊಬ್ಬ ಮಾದರೀ ನಯಕ.
ಪ್ರತೀಯೊಂದು ಕಾರ್ಯಾಚರಣೆಗಳೂ ಕೇವಲ ತೋರಿಕೆಗೆ ಮಾತ್ರ ಮಾಡುತ್ತಿರುವ, ಫೋಟೋ ಇಲ್ಲದೆ ಹತ್ತು ಜನರು ತಿಳಿಯದೇ ಮಾಡಲು ಮನಸ್ಸು ಹಿಂಜರಿಯುವ, ಒಂದು ಉತ್ತಮ ಕೆಲಸ ಮಾಡಿದರೆ ಕೂಡಲೇ ಅದನ್ನು ಪ್ರಚಾರ ಪಡಿಸಿ ಮರುದಿನ ಪತ್ರಿಕೆ/ ವಾಟ್ಸಪ್ ನಲ್ಲಿ ಹೆಸರು ಫೋಟೋ ಹಾಕಿಸಿ ಅದನ್ನು ನೋಡಿ ಆತ್ಮಾನಂದ ಪಡುವಂತಹ ಬ್ಯಾಡ್ ಥಿಂಕಿಂಗ್ ಅವರ ಜೀವಮಾನದಲ್ಲಿದ್ದಿಲ್ಲ. ಸಂಘಟನಾ ಕಾರ್ಯಾಚರಣೆಯಲ್ಲಿ ಅವರೊಬ್ಬ ರೋಲ್ ಮೋಡಲ್ ಆಗಿದ್ದರು.
“ಅಲ್ಲಾಹನ ವಜ್ಹಿಗೆ” ಎಂದು ಬಾಯಲ್ಲಿ ಹೇಳಿ ಮನಸ್ಸಲ್ಲಿ “ಎಲ್ಲರೂ ತಿಳಿಯಲು” “ನನಗೆ ಹೆಸರು ಬರಲು” “ನಾನೊಬ್ಬ ದೊಡ್ಡ ಲೀಡರ್ ಆದದ್ದು ಗೊತ್ತಾಗಲು” ಎಂದು ಭಾವಿಸಿ ಸಂಘಟನೆಗಳನ್ನು ತನ್ನ ಸ್ವಂತದ ” ಟ್ರೆಂಡ್ “
ಮಾಡಿಕೊಳ್ಳುವ ಕಿಂಚಿತ್ ಮನಸ್ಥಿತಿ ಅವರಲ್ಲಿರಲಿಲ್ಲ.
ಅವರು ಮಾಡುತ್ತಿದ್ದ ದಾನ ಅದು ಬಹಳಷ್ಟು ಸೀಕ್ರೆಟ್ ಆಗಿಯೇ ನಡೆಯುತ್ತಿತ್ತು. ಅದಕ್ಕಾಗಿ ಫೋಟೋ/ ಹೆಸರು ಹಚ್ಚ ಹಾಕಿ ಆಂದೋಲನ ನಡೆಸಿರಲಿಲ್ಲ. ಹೆಸರು ಬಂದರೂ ಇಲ್ಲದಿದ್ದರೂ ಎರಡನ್ನೂ ಸಮಾನ ಮನಸ್ಸಿನಿಂದ ಕಂಡ ಅಪ್ರತಿಮ ವ್ಯಕ್ತಿತ್ವವಾಗಿತ್ತು.
ಆ ಧನ್ಯ ಜೀವ ಇಂದು ಇಲ್ಲವಾದರೂ ಅವರ ಚಿಂತನೆಗಳು ಎಂದೂ ಅಜೇಯವಾಗಿ ಇರಲಿದೆ. ಸ್ವಾರ್ಥರಹಿತ ಜೀವನ ನಡೆಸಿದ್ದರಿಂದ ಅಸಂಖ್ಯಾತ ಜನ ಅವರಿಗಾಗಿ ಕಂಬನಿ ಮಿಡಿದಿದ್ದಾರೆ.ನೌಶಾದ್ ಹಾಜಿ ಇನ್ನೂ ಬೇಕಿತ್ತೆಂದು ಹಪಹಪಿಸುತ್ತಿದ್ದಾರೆ. ಆ ಧನ್ಯ ಜೀವನ ತಂದ ಕ್ರಾಂತಿ ಬಡವಾಯ್ತೋ ಎಂದು ದುಖಿಸುವಂತಿದೆ.
ಸಂಘಟನೆಯಲ್ಲೂ ಸಾಮರಸ್ಯದಿಂದ ಭಿನ್ನತೆಗಳ ರಗಳೆಗೆ ಹೋಗದೆ ಎಲ್ಲರೊಂದಿಗೂ ಬೆರೆಯುತ್ತಿದ್ದ ವ್ಯಕ್ತಿಯಾದ್ದರಿಂದ ಎಲ್ಲರೂ ಅವರ ಮರಣಕ್ಕೆ ನೊಂದುಕೊಂಡರು. ನೌಶಾದ್ ಹಾಜಿಯವರಿಗೆ ಅಲ್ಲಾಹನು ಮಗ್ಫಿರತ್ ನೀಡಲಿ ಎಂದು ಪ್ರಾರ್ಥಿ ಸೋಣ..