ಕರಾವಳಿ

30ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ತಪಾಸಣೆಗೊಳಪಡಿಸಿದ ಸುಳ್ಯ ಪೊಲೀಸರು..!

ಸುಳ್ಯ: ಸಂಶಯಾಸ್ಪದ ರೀತಿಯಲ್ಲಿ ನಂಬರ್ ಪ್ಲೇಟ್ ಗಳನ್ನು ಅಳವಡಿಸಿ ಸುಳ್ಯ ನಗರದಲ್ಲಿ ಓಡಾಡುತ್ತಿದ್ದ ಸುಮಾರು ಮೂವತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಪೊಲೀಸರು ತಪಾಶಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.


ವಿಚಾರಣೆ ವೇಳೆ ಇದು ಫ್ಯಾಷನ್ ಗಾಗಿ ಬಳಸಲಾಗಿದೆ ಕೂಡಲೇ ಇದನ್ನು ಸರಿಪಡಿಸುವುದಾಗಿ ವಾಹನ ಚಾಲಕರು ಪೊಲೀಸರ ಬಳಿ ಕೇಳಿಕೊಂಡಿದ್ದಾರೆ. ಬಳಿಕ ಇವರುಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಇವರಿಗೆ ಎಚ್ಚರಿಕೆಯನ್ನು ನೀಡಿ ಕಳುಹಿಸಿ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಬಳಿಕ ಸುಳ್ಯದಲ್ಲಿ ಈ ರೀತಿಯ ನಂಬರ್ ಪ್ಲೇಟ್ ಅಳವಡಿಸಿ ಕೊಡುವ ಸಂಸ್ಥೆಯವರನ್ನು ಠಾಣೆಗೆ ಕರೆಸಿ ಅವರಿಗೂ ಎಚ್ಚರಿಕೆಯನ್ನು ನೀಡಿದ್ದಾರೆ ಎನ್ನಲಾಗಿದೆ.

ದ್ವಿಚಕ್ರ ವಾಹನಗಳಲ್ಲಿ ಅದರಲ್ಲೂ ಅತ್ಯಾಧುನಿಕ ಫ್ಯಾಷನ್ ಬೈಕುಗಳಲ್ಲಿ ನಂಬರ್ ಪ್ಲೇಟ್ ಅಳವಡಿಸುವ ಸಂದರ್ಭ ಬೈಕಿನ ಹಿಂಭಾಗದ ಮಡ್ಗಾರ್ಡ್ ಒಳಬಾಗದಲ್ಲಿ ಮಡಚಿ ಇಡಲು ಸಾಧ್ಯವಾಗುವ ರೀತಿಯಲ್ಲಿ ನಂಬರ್ ಪ್ಲೇಟ್ ಗಳನ್ನು ಅಳವಡಿಸಿದ್ದು ಪೊಲೀಸರು ವಾಹನ ತಪಾಷಣೆ ನಡೆಸುವ ಸಂದರ್ಭ ಕೆಲವು ಬೈಕ್ಗಳಲ್ಲಿ ನಂಬರ್ ಪ್ಲೇಟ್ ಕಾಣದ ಕಾರಣ ತಡೆದು ವಿಚಾರಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಯಾವುದೇ ವಾಹನದ ಚಾಲಕರು ಅವೈಜ್ಞಾನಿಕ ರೀತಿಯಲ್ಲಿ ತಮ್ಮ ವಾಹನಗಳ ನಂಬರ್ ಪ್ಲೇಟ್ ಗಳನ್ನು ಅಥವಾ ವಾಹನದ ನಂಬರ್ ಕಾಣದ ರೀತಿಯಲ್ಲಿ ಎಕ್ಸ್ಟ್ರಾ ಫಿಟ್ಟಿಂಗ್ ಸಾಮಾಗ್ರಿಗಳನ್ನು ಅಳವಡಿಸಿ ಓಡಾಡುತ್ತಿರುವುದು ಕಂಡುಬಂದಲ್ಲಿ ಅಂತಹ ವಾಹನಗಳಮೇಲೆ ಮತ್ತು ಚಾಲಕರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ದಿಲೀಪ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!