ಕರಾವಳಿ

ಸುಳ್ಯ: ಬಿರುಕು ಬಿಟ್ಟ ಕ್ರೀಡಾಂಗಣ ಸ್ಥಳೀಯರಲ್ಲಿ ಹೆಚ್ಚಿದ ಆತಂಕ



ಸುಳ್ಯ ಶಾಂತಿನಗರ ಕ್ರೀಡಾಂಗಣದಲ್ಲಿ ಒಂದು ಭಾಗದಲ್ಲಿ ಭಾರಿ ಗಾತ್ರದ ಬಿರುಕುಗಳು ಉಂಟಾಗಿದ್ದು ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.


ಕಳೆದ ನಾಲಕ್ಕು, ಐದು ತಿಂಗಳ ಮೊದಲು ಶಾಂತಿನಗರ ಕ್ರೀಡಾಂಗಣದ ಅಭಿವೃದ್ಧಿ ಕಾರ್ಯ ಆರಂಭಗೊಳಿಸಲಾಗಿತ್ತು.
ಆ ಸಂದರ್ಭದಲ್ಲಿ ಕ್ರೀಡಾಂಗಣದ ಒಂದು ಭಾಗದಲ್ಲಿ ಭಾರಿ ಎತ್ತರಕ್ಕೆ ಮಣ್ಣುಗಳನ್ನು ಹಾಕಿ ಕ್ರೀಡಾಂಗಣವನ್ನು ವಿಶಾಲ ಗೊಳಿಸಲಾಗಿತ್ತು.
ಆ ಸಂದರ್ಭದಲ್ಲಿ ಈ ಭಾಗದಲ್ಲಿ ಹಾಕಿರುವ ಮಣ್ಣುಗಳು ಕುಸಿದು ಕೆಳಭಾಗದಲ್ಲಿ ಇರುವ ಮನೆಗಳಿಗೆ ಹಾನಿಯಾಗುವ ಆತಂಕವನ್ನು ಸೂಚಿಸಿದ ಸ್ಥಳೀಯರು, ಕೆಳಬಾಗದಲ್ಲಿ ತಡೆಗೋಡೆಯನ್ನು ನಿರ್ಮಿಸುವಂತೆ ಆಗ್ರಹವನ್ನು ವ್ಯಕ್ತಪಡಿಸಿದ್ದರು. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತರುವ ಕೆಲಸ ಕಾರ್ಯಗಳನ್ನು ಮಾಡಿದ್ದರು. ಮಾಧ್ಯಮಗಳಲ್ಲಿಯೂ ಕೂಡ ಇದರ ಬಗ್ಗೆ ಭಾರಿ ಚರ್ಚೆಗಳು ನಡೆದವು.


ನಂತರ ಸುಳ್ಯ ಶಾಸಕರ ನಿರ್ದೇಶನದ ಮೇರೆಗೆ ಸಂಬಂಧಪಟ್ಟ ಅಧಿಕಾರಿಗಳು ಕುಸಿಯುವ ಭೀತಿಯಲ್ಲಿದ್ದ ಮಣ್ಣಿನ ರಾಶಿಯ ಮೇಲೆ ತಾತ್ಕಾಲಿಕ ಪ್ಲಾಸ್ಟಿಕ್ ಟಾರ್ಪಲ್ ಅನ್ನು ಹೊದಿಸಿ ತಕ್ಕಮಟ್ಟಿಗೆ ಮಣ್ಣುಗಳು ಕೆಳಭಾಗಕ್ಕೆ ಜರಿಯದಂತೆ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲಾಗಿತ್ತು.
ಆದರೆ ಈ ಬಾರಿಯ ಮಳೆ ಮತ್ತು ಗಾಳಿಗೆ ಪ್ಲಾಸ್ಟಿಕ್ ಟರ್ಪಲ್ ಅರಿದು ಮಳೆಗಾಲದ ನೀರು ಮಣ್ಣಿನೊಳಗೆ ಪ್ರವೇಶಿಸಿ ಇದೀಗ ಭಾರಿ ಗಾತ್ರದ ಬಿರುಕುಗಳು ಕಾಣಿಸತೊಡಗಿದೆ.
ಇದೀಗ ಮತ್ತೆ ಮಳೆ ಆರಂಭಗೊಂಡಿದ್ದು ಮಳೆಯ ನೀರು ಹರಿದುಬಂದು ಈ ಬಿರುಕಿನಲ್ಲಿ ಸೇರುತ್ತಿದ್ದು ಸ್ಥಳೀಯರಲ್ಲಿ ಮತ್ತೆ ಆತಂಕ ಎದುರಾಗಿದೆ. ಸಂಬಂಧಪಟ್ಟವರು ಕೂಡಲೇ ಇತ್ತ ಗಮನ ಹರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!