ಕರಾವಳಿ

ವಿದೇಶ ಪ್ರವಾಸ ತೆರಳುತ್ತಿರುವ ಇಬ್ರಾಹಿಂ ಹಾಜಿ ಖತ್ತರ್ ಮಂಡೆಕೋಲುರವರಿಗೆ ಬೀಳ್ಕೊಡುಗೆ ಸಮಾರಂಭ

ಮಾಡನ್ನೂರ್ ನೂರುಲ್ ಹುದಾ ಎಜುಕೇಶನ್ ಟ್ರಸ್ಟ್ ಇದರ ಉಪಾಧ್ಯಕ್ಷ, ಕೆಎಂಸಿಸಿ ಜಿಲ್ಲಾ ಖಜಾಂಜಿ, ಸುಳ್ಯದ ಹಿರಿಯ ಸಾಮಾಜಿಕ ಮುಖಂಡ
ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆಸಲ್ಲಿಸುತ್ತಿರುವ ಹಾಜಿ ಇಬ್ರಾಹಿಂ ಖತ್ತರ್ ರವರು ನಾಲ್ಕು ರಾಷ್ಟ್ರಗಳಿಗೆ ಧಾರ್ಮಿಕ ಪ್ರವಾಸ ಕೈಗೊಳ್ಳುತ್ತಿದ್ದು ಅವರಿಗೆ ಇಂದು ಬೀಳ್ಕೊಡುಗೆ ಸಮಾರಂಭ ನಡೆಯಿತು.


ಇವರು ಜೋರ್ಡಾನ್, ಇಸ್ರೇಲ್, ಪ್ಯಾಲೆಸ್ತೀನ್, ಈಜಿಪ್ಟ್ ರಾಷ್ಟ್ರಗಳಿಗೆ ತೆರಳುತ್ತಿದ್ದು ಸುಳ್ಯದ ಗ್ರ್ಯಾಂಡ್ ಪರಿವಾರ ಉಡುಪಿ ಗಾರ್ಡನ್ ಸಭಾಂಗಣದಲ್ಲಿ ಸುಳ್ಯದ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಇವರ ವಿದೇಶ ಪ್ರವಾಸಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ
ಸುಳ್ಯ ವರ್ತಕರ ಸಂಘದ ಉಪಾಧ್ಯಕ್ಷ ಹಾಜಿ ಆದಮ್ ಕಮ್ಮಾಡಿ ದ. ಕ. ಉಡುಪಿ ಜಿಲ್ಲಾ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಉಪಾಧ್ಯಕ್ಷ ಕೆ ಎಂ ಮುಸ್ತಫಾ,ಸುಳ್ಯ ನಗರ ಪಂಚಾಯತ್ ಸದಸ್ಯರುಗಳಾದ ಕೆ ಎಸ್ ಉಮ್ಮರ್,ರಿಯಾಜ್ ಕಟ್ಟೆಕ್ಕಾರ್ಸ್, ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಕೋಶಾಧಿಕಾರಿ ಕೆ ಬಿ ಇಬ್ರಾಹಿಂ ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಉಪಾಧ್ಯಕ್ಷ ಎಸ್. ಸಂಶುದ್ದೀನ್, ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಅಧ್ಯಕ್ಷ ಅಬ್ದುಲ್ ಶುಕೂರ್ ಹಾಜಿ,ಅನ್ಸಾರಿಯ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್ ಜನತಾ, ಕಾರ್ಯದರ್ಶಿ ಲತೀಫ್ ಹರ್ಲಡ್ಕ, ಗಾಂಧಿನಗರ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಕೆ ಬಿ ಅಬ್ದುಲ್ ಮಜೀದ್,ಸುಳ್ಯ ತಾಲೂಕು ಮದರಸ ಮೆನೇಜ್ ಮೆಂಟ್ ಪದಾಧಿಕಾರಿ ತಾಜ್ ಮಹಮ್ಮದ್ ಕಲ್ಲುಗುಂಡಿ, ಮುಖಂಡರುಗಳಾದ ಅಕ್ಬರ್ ಕರಾವಳಿ, ಎಸ್ ವೈ ಎಸ್ ಮುಖಂಡ ಅಬೂಬಕ್ಕರ್ ಸಿದ್ದೀಕ್ ಕಟ್ಟೆಕ್ಕಾರ್ಸ್, ಜಮ್ಮೀಯತುಲ್ ಫಲಾಹ್ ಪೂರ್ವಧ್ಯಕ್ಷ ಮುಹಿಯದ್ದೀನ್ ಫ್ಯಾನ್ಸಿ,
ಗ್ರಾಂಡ್ ಪರಿವಾರ್ ಪಾಲುದಾರ ಸುಳ್ಯ ತಾಲೂಕು ಕಂಟ್ರಾಕ್ಟರ್ ಸಂಘದ ಅಧ್ಯಕ್ಷ ಅಬ್ದುಲ್ ಲತೀಫ್ ಮೊದಲಾದವರು ಉಪಸ್ಥಿತರಿದ್ದರು.
ಹಾಜಿ ಮುಸ್ತಫ ಜನತಾ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!