ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಪುತ್ತೂರಿನಲ್ಲಿ ಶುಭಾರಂಭ
ಪುತ್ತೂರು: ‘ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್’ ಇದರ ಪುತ್ತೂರು ಮಳಿಗೆ ಫೆ.22ರಂದು ಪುತ್ತೂರು ಏಳ್ಮುಡಿ ಸೇತುವೆ ಬಳಿಯ ತಾಜ್ ಟವರ‍್ಸ್‌ನಲ್ಲಿ ಶುಭಾರಂಭಗೊಂಡಿತು.
ನೂತನ ಮಳಿಗೆಯನ್ನು ಉದ್ಘಾಟಿಸಿದ ಜನಪ್ರಿಯ ಬಹುಭಾಷಾ ಚಿತ್ರನಟಿ ಪ್ರಿಯಾಮಣಿ ಮಾತನಾಡಿ ಸುಲ್ತಾನ್‌ನ 10ನೇ ಮಳಿಗೆ ಪುತ್ತೂರಿನಲ್ಲಿ ಶುಭಾರಂಭಗೊಂಡಿದ್ದು ಮುಂದಕ್ಕೆ ಎಲ್ಲೆಡೆ 100 ಮಳಿಗೆ ಉದ್ಘಾಟನೆ ಆಗಬೇಕು ಇದು ಭವಿಷ್ಯದಲ್ಲಿ ಅಭಿವೃದ್ಧಿಯ ಉತ್ತುಂಗಕ್ಕೆ ಏರಲಿ ಎಂದು ಅವರು ಹಾರೈಸಿದರು.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ಜೆಮ್ ಸ್ಟೋನ್ ಸಂಗ್ರಹವನ್ನು ಅನಾವರಣಗೊಳಿಸಿದರು. ಸುದಾನ ವಸತಿಯುತ ಶಾಲೆಯ ಸಂಚಾಲಕ ರೆ.ವಿಜಯ ಹಾರ್ವಿನ್ ಅವರು ಮಕ್ಕಳ ಚಿನ್ನಾಭರಣ ಮತ್ತು ಬೆಳ್ಳಿಯ ಸಂಗ್ರಹವನ್ನು ಅನಾವರಣಗೊಳಿಸಿದರು. ಲಯನ್ಸ್ 317ಡಿ ಇದರ ಅಧ್ಯಕ್ಷೆ ಡಾ.ರಂಜಿತಾ ಶೆಟ್ಟಿಯವರು ಅಂIಂ ಲೈಫ್ ಸ್ಟೈಲ್ ಜ್ಯುವೆಲ್ಲರಿಯನ್ನು ಅನಾವರಣಗೊಳಿಸಿದರು.
ವೈವಿಧ್ಯಮಯ ವಜ್ರಗಳ ಸಂಗ್ರಹವನ್ನು ಅನಾವರಣಗೊಳಿಸಿದ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ ಪುತ್ತೂರು ಚಿನ್ನದ ಮಾರುಕಟ್ಟೆ ಕೇಂದ್ರವಾಗಿ ಮಾರ್ಪಾಡಾಗುತ್ತಿದ್ದು ಇದೀಗ ಸುಲ್ತಾನ್ ಗೋಲ್ಡ್ ಅದಕ್ಕೆ ಇನ್ನಷು ಪುಷ್ಠಿ ನೀಡಿದೆ, ಪುತ್ತೂರು ಭಾಗದ ಜನರು ಚಿನ್ನಾಭರಣ ಪ್ರಿಯರಾಗಿದ್ದು ಪುತ್ತೂರಿನಲ್ಲಿ ಸಾಕಷ್ಟು ಚಿನ್ನದ ಮಳಿಗೆ ಇದೆ, ಪುತ್ತೂರಿನ ಚಿನ್ನದ ಮಳಿಗೆಯನ್ನು ಬೆಳೆಸುವ ಕಾರ್ಯವನ್ನು ಪುತ್ತೂರು ಆಸುಪಾಸಿನ ಜನತೆ ಮಾಡಿದ್ದಾರೆ ಎಂದರು.
ಕೊಂಬೆಟ್ಟು ರಾಮಕೃಷ್ಣ ಪ್ರೌಢ ಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಸುಲ್ತಾನ್ ಚಿನ್ನದ ಮಳಿಗೆ ಪುತ್ತೂರಿಗೆ ಬಂದಿರುವುದು ಖುಷಿ ನೀಡಿದೆ ಎಂದರು.
ಆಂಟಿಕ್ ಸಂಗ್ರಹವನ್ನು ಅನಾವರಣಗೊಳಿಸಿದ ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್ ಮಾತನಾಡಿ ಅಭಿವೃದ್ಧಿ ಹೊಂದುತ್ತಿರುವ ಪುತ್ತೂರಿನಲ್ಲಿ ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್ ಮಳಿಗೆ ಪೂರಕವಾಗಿದ್ದು ಮಳಿಗೆಯ ಬೆಳವಣಿಗೆಗೆ ನಾವೆಲ್ಲರೂ ಪ್ರೋತ್ಸಾಹಿಸಬೇಕಾಗಿದೆ ಎಂದು ಹೇಳಿದರು.
ಚಿನ್ನಾಭರಣಗಳ ಸಂಗ್ರಹವನ್ನು ಅನಾವರಣಗೊಳಿಸಿದ ಮೌಂಟೆನ್ ವ್ಯೂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಪಿ ಅಹ್ಮದ್ ಹಾಜಿ ಆಕರ್ಷಣ್ ಮಾತನಾಡಿ ಸುಲ್ತಾನ್ ಮಳಿಗೆ ಯಶಸ್ಸಿನ ಪಥದಲ್ಲಿ ಸಾಗಲಿ ಎಂದು ಹಾರೈಸಿದರು.
ಸಮಾರಂಭದಲ್ಲಿ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಅಧ್ಯಕ್ಷ ಪಿ.ಎಂ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಕಲ್ಲೇಗ ಜುಮಾ ಮಸೀದಿಯ ಗೌರವಾಧ್ಯಕ್ಷ ಬಿ.ಎ ಶಕೂರ್ ಹಾಜಿ ಕಲ್ಲೇಗ, ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್.ಟಿ ಅಬ್ದುಲ್ ರಝಾಕ್ ಹಾಜಿ, ಜಿ.ಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕದ ಅಧ್ಯಕ್ಷ ರಶೀದ್ ವಿಟ್ಲ, ಎಂ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಹಮ್ಮದ್ ಹನೀಫ್ ಹಾಜಿ, ನ್ಯಾಯವಾದಿಗಳಾದ ನೂರುದ್ದೀನ್ ಸಾಲ್ಮರ, ಶಾಕಿರ್ ಹಾಜಿ ಮಿತ್ತೂರು ಮತ್ತಿತರ ಹಲವಾರು ಮಂದಿ ಉಪಸ್ಥಿತರಿದ್ದರು
ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್ ಸಂಸ್ಥೆಯ ಆಡಳಿತ ನಿರ್ದೇಶಕರಾದ ಅಬ್ದುಲ್ ರವೂಫ್ ಮತ್ತು ಅಬ್ದುಲ್ ರಹೀಂ ಅತಿಥಿಗಳನ್ನು ಹೂಗುಚ್ಚ ನೀಡಿ ಸ್ವಾಗತಿಸಿದರು. ಸಂಸ್ಥೆಯ ಜನರಲ್ ಮ್ಯಾನೇಜರ್ ಉನ್ನಿತನ್, ಪುತ್ತೂರು ಬ್ರಾಂಚ್ ಮ್ಯಾನೇಜರ್ ಕೆ.ಎಸ್ ಮುಸ್ತಫಾ ಕಕ್ಕಿಂಜೆ ಹಾಗೂ ಸಿಬ್ಬಂದಿಗಳು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.ಶಾಹಿಲ್ ಝಹೀರ್ ಕಾರ್ಯಕ್ರಮ ನಿರೂಪಿಸಿದರು. ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್ ಮಳಿಗೆ ಉದ್ಘಾಟನಾ ಸಮಾರಂಭಕ್ಕೆ ಸಾವಿರಾರು ಮಂದಿ ಆಗಮಿಸಿದ್ದರು.