ಮಂಗಳೂರು: ಸಯ್ಯದ್ ಅಬ್ದುಲ್ ರಹಿಮಾನ್ ಭಾಫಕಿ ತಂಗಳ್ ಫೌಂಡೇಶನ್ ಕರ್ನಾಟಕ ವಾರ್ಷಿಕ ಮಹಾಸಭೆ
ಮಂಗಳೂರು: ಸಯ್ಯದ್ ಅಬ್ದುಲ್ ರಹಿಮಾನ್ ಭಾಫಕಿ ತಂಗಳ್ ಫೌಂಡೇಶನ್ ಕರ್ನಾಟಕ ಇದರ ವಾರ್ಷಿಕ ಮಹಾ ಸಭೆ ನಗರದ ಮುಸ್ಲಿಂ ಸೆಂಟ್ರಲ್ ಕಮಿಟಿ ಕಟ್ಟಡದಲ್ಲಿರುವ ಫೌಂಡೇಶನ್ ಕಚೇರಿಯಲ್ಲಿ ನಡೆಯಿತು. ನ್ಯಾಯವಾದಿ ಎಸ್. ಸುಲೈಮಾನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಫೌಂಡೇಶನ್ ನ ನೂತನ ಪದಾಧಿಕಾರಿಗಳನ್ನು ಸಭೆಯಲ್ಲಿ ಚುನಾಯಿಸಲಾಯಿತು.
ಅಧ್ಯಕ್ಷರಾಗಿ ಡಾ.ಶೇಖ್ ಭಾವ ಮಂಗಳೂರು, ಪ್ರಧಾನ ಕಾರ್ಯದರ್ಶಿಯಾಗಿ ಎ.ಎಸ್ ಇಬ್ರಾಹಿಂ ಕರೀಂ ಕಡಬ, ಕೋಶಾಧಿಕಾರಿಯಾಗಿ ರಿಯಾಝ್ ಹರೇಕಳ ಅವರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರುಗಳಾಗಿ ನ್ಯಾಯವಾದಿ ಎಸ್.ಸುಲೈಮಾನ್ (ಕಾನೂನು ವ್ಯವಹಾರ), ಅಹಮದ್ ಶಬೀರ್ ಅಝ್ಹರಿ, (ವಿದ್ಯಾರ್ಥಿ ಮಾರ್ಗದರ್ಶನ), ರಶೀದ್ ಹಾಜಿ ಪಾಂಡೇಶ್ವರ( ಸೇವಾ ಚಟುವಟಿಕೆಗಳು) ಎಚ್. ಮುಹಮ್ಮದ್ ಇಸ್ಮಾಯಿಲ್ (ಕಾರ್ಯಕ್ರಮ ಸಂಯೋಜನೆ) ಮತ್ತು ಕಾರ್ಯದರ್ಶಿಗಳಾಗಿ ಉನೈಸ್ ಕೊಡಗು, ಅಬ್ದುಲ್ ಅಹಿಮಾನ್ ಪನ್ಯ ಆಯ್ಕೆಯಾದರು.
ಪೋಷಕರುಗಳಾಗಿ ಹಾಜಿ ಅಬ್ದುಲ್ ರಶೀದ್ ಪರ್ಲಡ್ಕ, ಹಾಜಿ ಅಬ್ದುಲ್ ರಶೀದ್ ಉಳ್ಳಾಲ, ಕೆ.ಪಿ ಮುಹಮ್ಮದ್ ಶರೀಫ್ ಫೈಝಿ ಪನ್ಯ ಅವರನ್ನು ಆಯ್ಕೆ ಮಾಡಲಾಯಿತು.
ಮುಂದಿನ ಶೈಕ್ಷಣಿಕ ವರ್ಷದಿಂದ ಮುಸ್ಲಿಂ ವಿದ್ಯಾರ್ಥಿಗಳ ಲೌಕಿಕ ಮತ್ತು ಧಾರ್ಮಿಕ ಉನ್ನತ ವಿದ್ಯಾಬ್ಯಾಸಕ್ಕೆ ಅಗತ್ಯ ಮಾರ್ಗದರ್ಶನ ನೀಡಲು ವಿವಿದ ಕಾರ್ಯಕ್ರಮಗಳನ್ನು ರೂಪಿಸಲು ತೀರ್ಮಾನಿಸಲಾಯಿತು.
ಎ.ಎಸ್.ಇ ಕರೀಂ ಸ್ವಾಗತಿಸಿ ಎಚ್ ಮುಹಮ್ಮದ್ ಇಸ್ಮಾಯಿಲ್ ವಂದಿಸಿದರು.