ಅಂತಾರಾಷ್ಟ್ರೀಯಕ್ರೀಡೆ

ತಾಯಿಫ್ ಪ್ರೀಮಿಯರ್ ಲೀಗ್ ಸೀಸನ್-6 Gladiator Taif ಮಡಿಲಿಗೆ

ತಾಯಿಫ್ ಫೈಟರ್ಸ್ ಸ್ಪೋರ್ಟ್ಸ್ ಕ್ಲಬ್ (ತಾಯಿಫ್ ಸೌದಿ ಅರೇಬಿಯಾ)ಇದರ ಆಶ್ರಯದಲ್ಲಿ ನಡೆದ ಅಂಡರ್ ಆರ್ಮ್ ಮಾದರಿಯ TAIF PREMIER LEAGUE TPL-6 ಕ್ರಿಕೆಟ್ ಪಂದ್ಯಾಕೂಟವು ತಾಯಿಫ್ ‘ನ ಫೈಸಲಿಯಾದಲ್ಲಿ ನಡೆಯಿತು.


ಸತತ ಮೂರು ಶುಕ್ರವಾರದಂದು ನಡೆದ ಲೀಗ್ ಹಂತವು, ಡಿ.29ರಂದು ಸಮಾಪ್ತಿಗೊಂಡಿತು. ರೋಮಾಂಚನಕಾರಿಯಾಗಿ ಸಾಗಿದ ಪಂದ್ಯಾಕೂಟದಲ್ಲಿ ಸಲೀಂ ಸೂರಿಂಜೆ ನಾಯಕತ್ವದ Gladiators Taif , ನೌಫಲ್ ಬೆಂಗ್ರೆ ‌ನಾಯಕತ್ವದ Young Fighters Taif, ಹಫೀಝ್ ಅಡ್ಡೂರು ನೇತೃತ್ವದ Royal strikers Taif ಮತ್ತು ಅವಿನಾಶ್ ಕೊಣಾಜೆ ನಾಯಕತ್ವದ Game swingers Taif ತಂಡಗಳು ಭಾಗವಹಿಸಿದವು.

ಉತ್ತಮ ಪ್ರದರ್ಶನದೊಂದಿಗೆ ಆಡಿದ Game swingers Taif ಲೀಗ್ ಹಂತದಲ್ಲೇ ಹೊರನಡೆದರೆ, Young Fighters Taif ತಂಡವು ಎರಡೂ qualifier’ನಲ್ಲಿ ಸೋಲುದರೊಂದಿಗೆ ಕೂಟದಿಂದ ಹೊರನಡೆಯಿತು ,
ಮುಂದೆ Gladiators Taif ಮತ್ತು Royal strikers Taif ಫೈನಲ್ ಪ್ರವೇಶಿಸಿ ಜಿದ್ದಾ-ಜಿದ್ದಿನ ಆಟಕ್ಕೆ ಫೈಸಲಿಯಾದ ಕ್ರೀಡಾಂಗಣ ಸಾಕ್ಷಿಯಾಯಿತು,

ಟಾಸ್ ಸೋತು ಇನ್ನಿಂಗ್ಸ್ ಆರಂಭಿಸಿದ Royal strikersTaif ತಂಡವು ನಾಯಕ ಹಫೀಝ್ ಅಡ್ಡೂರು ರವರ ಭರ್ಜರಿ ಆರಂಭಿಕ ಆಟದೊಂದಿಗೆ ಬೃಹತ್ ಮೊತ್ತ 47 ಕಲೆ ಹಾಕಿತು,
ಗುರಿ ಬೆನ್ನಟ್ಟಿ ಇನ್ನಿಂಗ್ಸ್ ಆರಂಭಿಸಿದ Gladiator Taif ತಂಡವು 4 ಉದ್ದರಿ ಕಳೆದು ವಿಜಯದ ಪತಾಕೆ ಹಾರಿಸಿ 2023,ರ ಸೀಸನ್ -6 ಚಾಂಪಿಯನ್ಸ್ ಟ್ರೋಫಿ ತನ್ನದಾಗಿಸಿದರು

ಆಲ್’ರೌಂಡರ್ ಪ್ರದರ್ಶನ ನೀಡಿದ ದೈತ್ಯ ಆಟಗಾರ ಇರ್ಶಾದ್ ಸುಳ್ಯ 16 ವಿಕೆಟ್ ಮತ್ತು 101 ರನ್ ಬಾರಿಸಿದ ಅವರು Man the series ಪ್ರಶಸ್ತಿ ತನ್ನಗಾಗಿಸಿದಲ್ಲದೆ, ಸ್ಫೋಟಕ ದಂಡನೆಯ ಮೂಲಕ 101 ರನ್ ಸಿಡಿಸಿದಕ್ಕೆ ಅನುಗುಣವಾಗಿ Best Batsman ಪ್ರಶಸ್ತಿಯು ಕೂಡ ತನ್ನವಶವಾಗಿಸಿದರು

16 ವಿಕೆಟ್ ಉರುಳಿಸಿ ಉತ್ತಮ ದಾಳಿ ಸಂಘಟಿಸಿ Best bowler ಪ್ರಶಸ್ತಿಯೂ ಇರ್ಶಾದ್ ಸುಳ್ಯ ಪಾಲಾಯಿತು.

ಮಿಂಚಿನ ಗೂಟರಕ್ಷಕ Best Keepar ಪ್ರಶಸ್ತಿ ಸಾಬಿತ್ ಮನಾಲ್ ಸ್ವೀಕರಿಸಿದರು. ಉತ್ತಮ ಕ್ಷೇತ್ರರಕ್ಷಕ ಪ್ರಶಸ್ತಿ ಫೈಝಲ್ ಗುರುಪುರ ಪಾಲಾಯಿತು. ಫೈನಲ್ ಹೀರೋ ಶಫೀಕ್ ಮಂಜೇಶ್ವರ ಪಡೆದರೆ, ಇರ್ಶಾದ್ ಸುಳ್ಯ Game changer ಪ್ರಶಸ್ತಿಗೆ ಭಾಜನರಾದರು.

Leave a Reply

Your email address will not be published. Required fields are marked *

error: Content is protected !!