ಸುಳ್ಯ ಬೀರಮಂಗಲದಲ್ಲಿ ಪತ್ನಿಯನ್ನು ಕೊಂದು ಗೋಣಿ ಚೀಲದಲ್ಲಿ ತುಂಬಿ ಪರಾರಿಯಾದ ಆರೋಪಿ ಅರೆಸ್ಟ್

ಸುಳ್ಯದ ಬೀರಮಂಗಲದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದು ತನ್ನ ಪತ್ನಿಯನ್ನು ಕೊಂದು ಗೋಣಿಯಲ್ಲಿ ತುಂಬಿಟ್ಟು ಪರಾರಿಯಾಗಿದ್ದ ಆರೋಪಿ ಪಶ್ಚಿಮ ಬಂಗಾಳ ಮೂಲದ ಇಮ್ರಾನ್ ಶೇಖ್ ನನ್ನು ಸುಳ್ಯ ಪೋಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪತ್ನಿಯನ್ನು ಕೊಂದು ಗೋಣಿಯಲ್ಲಿ ತುಂಬಿ ಸುಳ್ಯದಿಂದ ಪರಾರಿಯಾಗಿದ್ದ ಇಮ್ರಾನ್ ತನ್ನ ಊರಿಗೆ ಹೋಗಿದ್ದನೆಂದೂ, ಅಲ್ಲಿಯ ಪೋಲೀಸರ ಸಹಾಯ ಪಡೆದು ಸುಳ್ಯ ಪೋಲೀಸರು ಆತನನ್ನು ನ.24ರಂದು ಸಂಜೆ ಸುಳ್ಯಕ್ಕೆ ಕರೆತಂದಿರುವುದಾಗಿ ತಿಳಿದು ಬಂದಿದೆ.