ಕರಾವಳಿ

ತುಳುನಾಡಿನ ದೈವರಾಧನೆಯ ಆಚರಣೆ ಮನರಂಜನೆಯ ಉದ್ದೇಶಕ್ಕೆ ಬಳಕೆಯಾಗುತ್ತಿರುವುದಕ್ಕೆ ಖಂಡನೆ: ಕ್ರಮ ಕೈಗೊಳ್ಳುವಂತೆ ಸುಳ್ಯ ಅಜಿಲ ಸೇವಾ ಸಮಿತಿಯಿಂದ ಮನವಿ

ಕಾಂತಾರ ಚಲನಚಿತ್ರದ ಮೂಲಕ ತುಳುನಾಡಿನ ದೈವಾರಾಧನೆಯ ಬಗ್ಗೆ ಮಾಡಿರುವ ಪಾತ್ರದಲ್ಲಿ ನಟ ರಿಷಬ್ ಶೆಟ್ಟಿ ಯವರು ತುಳುನಾಡಿನ ದೈವಾರಾಧನೆಯನ್ನು ಮನರಂಜನೆಯ ಉದ್ದೇಶದಿಂದ ಮಾಡಿದ್ದು ಇದು ನಮ್ಮ ತುಳುನಾಡಿನ ದೈವರಾಧನೆ ಮಾಡುವ ವರ್ಗದವರಿಗೆ ಮಾಡಿರುವ ಅನ್ಯಾಯವಾಗಿದೆ. ಚಿತ್ರದಲ್ಲಿ ಬಂದಿರುವ ವೇಷ ಭೂಷಣಗಳು, ದೈವದ ಸಿರಿ ಗಗ್ಗರ ಇವುಗಳನ್ನು ಧರಿಸಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸುತ್ತಿರುವುದು ನಿರ್ದಿಷ್ಟ ಸಮುದಾಯದವರಿಗೆ ತುಂಬಾ ನೋವು ತಂದಿದೆ.
ಸಾರ್ವಜನಿಕ ಸ್ಥಳಗಳಲ್ಲಿ, ಮೆರವಣಿಗೆ ಸಮಾರಂಭಗಳಲ್ಲಿ ಇತ್ತೀಚಿನ ದಿನಗಳಲ್ಲಿ ದೈವ ನರ್ತನವನ್ನು ಪ್ರದರ್ಶನಕ್ಕಾಗಿ ಬಳಸುತ್ತಿದ್ದಾರೆ. ಆದ್ದರಿಂದ ಈ ವಿಷಯಗಳನ್ನು ಸೂಕ್ಷ್ಮವಾಗಿ ಪರಿಗಣಿಸಿ ನಮ್ಮ ಸಮುದಾಯದ ಆಚಾರ ವಿಚಾರಗಳನ್ನು ಇದರ ಬಗ್ಗೆ ಮಾಹಿತಿ ಇಲ್ಲದವರು ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಮಾಡುತ್ತ ಹಿಂದೂ ಸಮುದಾಯಕ್ಕೆ ಅವಮಾನ ಮಾಡುವ ಸಂಗತಿಯಾಗಿದೆ. ಆದ್ದರಿಂದ ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಸುಳ್ಯ ಅಜಿಲ ಸೇವಾ ಸಮಿತಿ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ದೈವಾರಾಧನೆ ಸಮಿತಿ ಅಧ್ಯಕ್ಷ ಜನಾರ್ದನ ಬುಡೋಳಿ ರವರಿಗೆ ಮನವಿಯನ್ನು ನೀಡಿ ವಿನಂತಿಸಿಕೊಂಡಿದ್ದಾರೆ. ಇದಕ್ಕೆ ದೈವಾರಾಧನಾ ಸಮಿತಿ ದ.ಕ ಜಿಲ್ಲಾಧ್ಯಕ್ಷ ಜನಾರ್ಧನ ಬುಡೋಳಿ ಬೆಂಬಲ ಸೂಚಿಸಿದ್ದಾರೆ.


ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಅಜಿಲ ಯಾನೆ ನಲಿಕೆ ಸೇವಾ ಸಮಾಜ ಅಧ್ಯಕ್ಷ ರೋಷನ್ ಸರಳಿಕುಂಜ, ಕಾರ್ಯದರ್ಶಿ ಜಯರಾಮ ಬಾಳಿಲ,ಮತ್ತು ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!