ಬಂಟ್ವಾಳ: ಅಕ್ರಮ ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ, ಆರು ಮಂದಿ ವಶಕ್ಕೆ, ಓರ್ವ ಪರಾರಿ
ಬಂಟ್ವಾಳ ತಾಲೂಕಿನ ಪಿಲಿಮೊಗ್ರು ಗ್ರಾಮದ ನಡಾಯಿ ಎಂಬಲ್ಲಿ ಅಕ್ರಮವಾಗಿ ಜುಗಾರಿ ಆಟ ನಡೆಯುತ್ತಿದ್ದ ಸ್ಥಳಕ್ಕೆ ಬುಧವಾರ ರಾತ್ರಿ ಬಂಟ್ವಾಳ ಗ್ರಾಮಾಂತರ ಪೊಲೀಸರು ದಾಳಿ ನಡೆಸಿದ್ದು, ಆರು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದು ಓರ್ವ ಪರಾರಿಯಾಗಿದ್ದಾನೆ.
ಬಂಧಿತ ಆರೋಪಿಗಳನ್ನು ಶಿವರಾಮ ನಾಯಕ್ (56), ಸತೀಶ (43), ಅಶ್ರಫ್ (47), ಸುರೇಶ (35), ಗೋಪಾಲ (41), ಯೋಗೀಶ ಪ್ರಭು, (46) ಎಂದು ಹೆಸರಿಸಲಾಗಿದ್ದು, ಜಯಣ್ಣ ಅಲಿಯಾಸ್ ಜಯಚಂದ್ರ ಬೊಳ್ಮಾರ್ ಎಂಬಾತ ಪೊಲೀಸರ ಕೈಗೆ ಸಿಗದೆ ಪರಾರಿಯಾಗಿದ್ದಾನೆ.