ಇಳಂತಿಳ ಜ್ಞಾನ ಭಾರತಿ ಇಂಗ್ಲೀಷ್ ಮೀಡಿಯಮ್ ಸ್ಕೂಲ್’ನಲ್ಲಿ ಕಲಿಕೊಪಕರಣಗಳ ದಿನಾಚರಣೆ
ಉಪ್ಪಿನಂಗಡಿ: ಜ್ಞಾನ ಭಾರತಿ ಇಂಗ್ಲೀಷ್ ಮೀಡಿಯಮ್ ಸ್ಕೂಲ್ ಇಳಂತಿಳ ವಿದ್ಯಾನಗರ ಉಪ್ಪಿನಂಗಡಿ ಇಲ್ಲಿ ಸರ್ಕಾರದ ಶಿಕ್ಷಾಸಪ್ತ ಕಾರ್ಯ ಕ್ರಮದ ಅಂಗವಾಗಿ ಕಲಿಕೋಪಕರಣಗಳ ದಿನ ಆಚರಿಸಲಾಯಿತು. ವಿದ್ಯಾರ್ಥಿಗಳು ಕಲಿಕೊಪಕರಣಗಳನ್ನು ಕುತೂಹಲದಿಂದ ವೀಕ್ಷಿಸಿದರು.
ಶಾಲಾ ಸಂಚಾಲಕ ರವೂಪ್ ಯು. ಟಿ ಮತ್ತು ಪ್ರಾಂಶುಪಾಲ ಇಬ್ರಾಹಿಂ ಕಲೀಲ್ ಹೇಂತಾರ್ ಕಲಿಕೊಪಕರಣಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಮುಖ್ಯ ಶಿಕ್ಷಕಿ ಅರುಣಾ, ಸಹ ಶಿಕ್ಷಕಿಯರಾದ ಉಷಾ, ಪ್ರಮೀಳಾ, ಶಮೀಮಾ, ಫಾತಿಮಾ ಸವಿತಾ ಇದ್ದರು.