Uncategorized

60 ಲಕ್ಷ ರೂ ಮೌಲ್ಯದ 500 ಕೆ.ಜಿ ಗಾಂಜಾ ತಿಂದ ಇಲಿಗಳು..!



500 ಕೆಜಿಗೂ ಹೆಚ್ಚು ಗಾಂಜಾವನ್ನು ಇಲಿಗಳು ತಿಂದಿವೆ ಎಂದು ಪೊಲೀಸರೇ ಅಧಿಕೃತ ಮಾಹಿತಿ ನೀಡಿದ ಘಟನೆಯೊಂದು ಭಾರೀ ಸಂಚಲನ ಸೃಷ್ಟಿಸುತ್ತಿದೆ.

ಸಾಂದರ್ಭಿಕ ಚಿತ್ರ

ಹೆದ್ದಾರಿಗಳಲ್ಲಿ ಜಪ್ತಿ ಮಾಡಲಾದ ಗಾಂಜಾವನ್ನು ಗೋದಾಮುಗಳಲ್ಲಿ ಸಂಗ್ರಹಿಸಲಾಗಿತ್ತು. ಎನ್‌ಡಿಪಿಎಸ್‌ ಕಾಯ್ದೆಯಡಿ ದಾಖಲಾದ ಪ್ರಕರಣದಲ್ಲಿ ವಶಪಡಿಸಿಕೊಂಡ ಗಾಂಜಾವನ್ನು ಹಾಜರುಪಡಿಸುವಂತೆ ನ್ಯಾಯಾಲಯವು ಈ ವರ್ಷದ ಆರಂಭದಲ್ಲಿ ಮಥುರಾ ಪೊಲೀಸರಿಗೆ ಕೇಳಿತ್ತು. ಆದರೆ ಮಥುರಾ ಪೊಲೀಸರು ನ್ಯಾಯಾಲಯಕ್ಕೆ 500 ಕೆಜಿಗೂ ಹೆಚ್ಚು ಗಾಂಜಾವನ್ನು ಇಲಿಗಳು ಸೇವಿಸಿವೆ ಎಂದು ತಿಳಿಸಿದ್ದಾರೆ.

ಇದನ್ನು ಕೇಳಿದ ನ್ಯಾಯಾಲಯ ನಿಖರವಾಗಿ 60 ಲಕ್ಷ ರೂಪಾಯಿ ಮೌಲ್ಯದ ಗಾಂಜಾವನ್ನು ಇಲಿಗಳು ಸೇವಿಸಿವೆ ಎಂಬುದಕ್ಕೆ ಪುರಾವೆಯನ್ನು ತಲುಪಿಸುವಂತೆ ಆದೇಶಿಸಿದೆ. ಪೊಲೀಸ್ ಗೋದಾಮುಗಳಲ್ಲಿ ಇರಿಸಿದ ವಸ್ತುಗಳನ್ನು ರಕ್ಷಿಸಲು ಪೊಲೀಸರು ಅಸಾಧ್ಯವೆಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ನಂತರ ದಾವೆಗೆ ಸಂಬಂಧಿಸಿದಂತೆ ಸಾಕ್ಷ್ಯವನ್ನು ಹಾಜರುಪಡಿಸುವಂತೆ ನ್ಯಾಯಾಲಯವು ಪೊಲೀಸರಿಗೆ ಆದೇಶಿಸಿದೆ.

ಮೇ 2020ರಲ್ಲಿ ಟ್ರಿಕ್‌ನಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ ಮೂವರನ್ನು ಮಥುರಾದಲ್ಲಿ ಬಂಧಿಸಲಾಗಿತ್ತು. ರಾಗಿ ಚೀಲಗಳಲ್ಲಿ ಅಡಗಿಸಿಟ್ಟ 386 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಯಿತು. 2021 ರಲ್ಲಿ ನಡೆದ ಇದೇ ರೀತಿಯ ಘಟನೆಯಲ್ಲಿ ವಶಪಡಿಸಿಕೊಂಡ 1,400 ಕಾರ್ಟನಗಳ ಮದ್ಯವನ್ನು ಇಲಿಗಳು ಸೇವಿಸಿವೆ ಎಂದು ಇಟಾ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!