ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊಗೆ ಇನ್’ಸ್ಟಾಗ್ರಾಂನಲ್ಲಿ ಇರುವ ಫಾಲೋವರ್ಸ್ ಎಷ್ಟು ಗೊತ್ತಾ..?
ಫುಟ್ಬಾಲ್ ದಿಗ್ಗಜ ಆಟಗಾರರಲ್ಲಿ ಓರ್ವನಾದ ಪೋರ್ಚುಗಲ್ ರಾಷ್ಟ್ರೀಯ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ, ಇನ್’ಸ್ಟಾಗ್ರಾಂ ಖಾತೆಯಲ್ಲಿ 50 ಕೋಟಿ ಫಾಲೋವರ್ಸ್’ಗಳನ್ನು ಹೊಂದುವ ಮೂಲಕ ದಾಖಲೆ ಬರೆದಿದ್ದಾರೆ.

ವಿಶ್ವ ಪ್ರಖ್ಯಾತ ಫುಟ್ವಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೋ ಅವರು ಫೋರ್ಚುಗಲ್ ತಂಡದ ಮತ್ತು ನಾಯಕ ಮತ್ತು ಮುಂಚೂಣಿ ಆಟಗಾರನಾಗಿದ್ದು, ಜಗತ್ತಿನಾದ್ಯಂತ ಕೋಟ್ಯಂತರ ಬೆಂಬಲಿಗರನ್ನು ಹೊಂದಿದ್ದಾರೆ.
1992ರಲ್ಲಿ ಫುಟ್ಬಾಲ್ ಆಟ ಆರಂಭಿಸಿದ ರೊನಾಲ್ಡೋ ಅವರು ಇದುವರೆಗೂ ವಿಶ್ವಕಪ್ ಸೇರಿದಂತೆ ಹಲವು ಪಂದ್ಯಾಕೂಟದಲ್ಲಿ ಭಾಗವಹಿಸಿದ ಅನುಭವ ಹೊಂದಿದ್ದು, 4 ಗೋಲ್ಡನ್ ಶೂ ಅನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ತಂಡದ ಆಟಗಾರನಾಗಿದ್ದು, ಫುಟ್ಬಾಲ್ ಹೊರತು ಪಡಿಸಿ ಮಾನವೀಯ ಸೇವೆಗೂ ಪ್ರಖ್ಯಾತಿಯನ್ನೂ ಹೊಂದಿದ್ದಾರೆ. ಕಳೆದ ವಿಶ್ವಕಪ್’ನಲ್ಲಿ ಗೆದ್ದ ಗೋಲ್ಡನ್ ಶೂ ಮೊತ್ತವನ್ನು ಫೆಲೆಸ್ತೀನ್ ದೇಶಕ್ಕೆ ದೇಣಿಗೆ ನೀಡಿದ್ದರು.