ಡಿಜಿಟಲ್ ಸೈನೇಜ್ ಕ್ಷೇತ್ರಕ್ಕೆ ಹೊಸ ಎಂಟ್ರಿ: “ಪಿಕ್ಸ್‌ನಾಕ್” ಸಾಫ್ಟ್‌ವೇರ್ ಲೋಕಾರ್ಪಣೆ
ಡಿಜಿಟಲ್ ಸೈನೇಜ್ ಕ್ಷೇತ್ರದಲ್ಲಿ ೧೩ ವರ್ಷಗಳ ಅನುಭವ ಹೊಂದಿರುವ ಆಕ್ಸಿ ಡಿಜಿಟಲ್ ಕಂಪೆನಿ ಜೊತೆ ಸೇರಿ ಪಿಕ್ಸ್‌ನಾಕ್ ಸಂಸ್ಥೆಯು ತನ್ನ ನೂತನ ಸಾಫ್ಟ್‌ವೇರ್‌ನ್ನು ಬಿಡುಗಡೆಗೊಳಿಸಿದೆ.
ಆಕ್ಸಿ ಡಿಜಿಟಲ್ ಕಂಪೆನಿಯು ಜಾಗತಿಕವಾಗಿ ಸಾವಿರಾರು ಇನ್ಸ್ಟಾಲೇಶನ್‌ಗಳನ್ನು ನಿರ್ವಹಿಸಿರುವ ಅನುಭವ ಹೊಂದಿದ್ದು ಡಿಜಿಟಲ್ ಸೈನೇಜ್ ಮತ್ತು ಡಿಜಿಟಲ್ ಔಟ್ ಆಫ್ ಹೋಮ್ ಜಾಹೀರಾತುಗಳ ಆಧುನಿಕ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗಲಿದೆ.
ಹದಿನೈದು ವರ್ಷಗಳಿಂದ ಡಿಜಿಟಲ್ ಸೈನೇಜ್ ವಲಯದಲ್ಲಿ ಮುಂಚೂಣಿಯಲ್ಲಿದ್ದ ತಜ್ಞರಿಂದ ಸ್ಥಾಪಿಸಲ್ಪಟ್ಟ ‘ಪಿಕ್ಸ್‌ನಾಕ್’ ಸಾಫ್ಟ್‌ವೇರ್ ಆಸ್ಪತ್ರೆ, ಸಾರಿಗೆ, ವಿಮಾನ ನಿಲ್ದಾಣ, ರೈಲ್ವೇ ಮುಂತಾದ ಸ್ಥಳಗಳಲ್ಲಿ ಇದನ್ನು ಸುಲಭವಾಗಿ ಬಳಸಬಹುದಾಗಿದೆ. ಹೆಚ್ಚುತ್ತಿರುವ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪಿಕ್ಸ್‌ನಾಕ್ ಸಾಫ್ಟ್‌ವೇರ್‌ನ್ನು ಅಭಿವೃದ್ಧಿಪಡಿಸಲಾಗಿದ್ದು ಇದು ಬಳಕೆದಾರರಿಗೆ ಹೆಚ್ಚು ಆದಾಯ ಗಳಿಸಲು ಸಹಾಯಕವಾಗಲಿದೆ.
ಪಿಕ್ಸ್‌ನಾಕ್ ಸಾಫ್ಟ್‌ವೇರ್ ಹಲವು ವೈಶಿಷ್ಟ್ಯತೆಗಳನ್ನು ಹೊಂದಿದ್ದು ಡೈನಾಮಿಕ್ ಕಂಟೆಂಟ್ ನಿರ್ವಹಣೆ ಹೊಂದಿದ್ದು ನಿರ್ದಿಷ್ಟ ಸ್ಥಳಗಳಲ್ಲಿ ಪರದೆಯ ಮೇಲೆ ಬಿತ್ತರವಾಗುವ ಜಾಹೀರಾತುಗಳನ್ನು ಸಮಯಾನುಸಾರವಾಗಿ ನವೀಕರಣ ಮಾಡಬಹುದಾಗಿದೆ. ಗ್ರಾಹಕರು ನೀಡುವ ಜಾಹೀರಾತುಗಳು ಪ್ರಸಾರಗೊಂಡ ಸಂಪೂರ್ಣ ಮಾಹಿತಿಯನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ನೋಡಬಹುದಾಗಿದೆ. ಅಲ್ಲದೇ ಪ್ರಪಂಚದ ಯಾವುದೇ ಸ್ಥಳದಲ್ಲಿದ್ದರೂ ಸುಲಭವಾಗಿ ತಮ್ಮ ಸ್ವಂತ ಕಚೇರಿಯಿಂದಲೇ ಸೈನೇಜ್ ಪರದೆಯನ್ನು ನಿರ್ವಹಿಸಲು ಸಾಧ್ಯವಾಗುತ್ತದೆ.
ಪಿಕ್ಸ್‌ನಾಕ್ ಸಾಫ್ಟ್‌ವೇರ್ ಅಭಿವೃದ್ಧಿಯ ಮುನ್ನೋಟವನ್ನು ಮುಖ್ಯ ತಂತ್ರಜ್ಞಾನ ಅಧಿಕಾರಿ(ಸಿಟಿಒ) ಆದಿಲ್ ಅವರು ನಿರ್ವಹಿಸುತ್ತಿದ್ದು ವ್ಯವಹಾರಿಕ ವಿಭಾಗವನ್ನು ಪಿಕ್ಸ್‌ನಾಕ್ ಸಿಇಒ ನವಾಝ್ ಅಬ್ದುಲ್ಲ ನಿರ್ವಹಿಸುತ್ತಿದ್ದಾರೆ. ತಂತ್ರಜ್ಞಾನ ವಿಭಾಗವನ್ನು ನುರಿತ ಸಾಫ್ಟ್‌ವೇರ್ ಇಂಜಿನಿಯರ್ ಮುಹಿಯುದ್ದೀನ್ ಮಹ್‌ರೂಫ್ ನೇತೃತ್ವದ ತಂಡ ಮುನ್ನಡೆಸುತ್ತಿದೆ. ಪಿಕ್ಸ್‌ನಾಕ್ ಸಾಫ್ಟ್‌ವೇರ್ ಸಂಸ್ಥೆಯು ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು ಪುತ್ತೂರಿನ ಕುಂಬ್ರದಲ್ಲಿ ಇದರ ಸಹ ಕಚೇರಿಯನ್ನು ಹೊಂದಿರುತ್ತದೆ.