ನಾಯಿಯಂತೆ ಬೊಗಳಿದ ವ್ಯಕ್ತಿ ಓಡಿ ಹೋದ ಅಧಿಕಾರಿ..!
ರೇಷನ್ ಕಾರ್ಡ್ ನಲ್ಲಿ ತಪ್ಪಾಗಿ ಹೆಸರು ಮುದ್ರಿಸಿದ್ದಕ್ಕೆ ವ್ಯಕ್ತಿಯೊಬ್ಬ ನಾಯಿಯಂತೆ ಬೊಗಳಿ ಪ್ರತಿಭಟನೆ ನಡೆಸಿರುವ ಘಟನೆ ಪಶ್ಚಿಮ ಬಂಗಾಳದ ಬಂಕುರಾದಲ್ಲಿ ನಡೆದಿದೆ.

ರೇಷನ್ ಕಾರ್ಡ್ನಲ್ಲಿ ‘ಕುತ್ತಾ’ ಎಂದು ತಪ್ಪಾಗಿ ಮುದ್ರಿಸಿದ್ದಕ್ಕೆ ಆಕ್ರೋಶಗೊಂಡ ವ್ಯಕ್ತಿಯೋರ್ವರು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಕಾರಿನ ಕಿಟಕಿ ಬಳಿ ನಿಂತು ನಾಯಿಯಂತೆ ಬೊಗಳುತ್ತಾ ದಾಖಲೆಗಳನ್ನು ಅಧಿಕಾರಿಗೆ ತೊರಿಸಿದ್ದಾನೆ.
ಶ್ರೀಕಂಠಿ ಕುಮಾರ್ ದತ್ತ ಎಂದು ಬರೆಯಲು ಶ್ರೀಕಂಠಿ ಕುಮಾರ್ ಕುತ್ತಾ ಎಂದು ಬರೆದಿದ್ದಾರೆ. ಕುತ್ತಾ ಅಂದರೆ ನಾಯಿ ಎಂದರ್ಥ.ಈ ಹಿಂದೆ ಎರಡು ಮೂರು ಬಾರಿ ಗಮನಕ್ಕೆ ತಂದು ಹೆಸರು ಸರಿಪಡಿಸಿದರೂ ಮತ್ತೆ ಅದೇ ತಪ್ಪು ಮರುಕಳಿಸಿರುವ ಕಾರಣ ಈ ಬಾರಿ ಶ್ರೀಕಂಠಿ ಪ್ರತಿಭಟನೆ ಮಾಡಿದ್ದಾರೆ.
ನಾಯಿಯಂತೆ ಬೊಗಳಿ ಪ್ರತಿಭಟಿಸಿದ್ದಕ್ಕೆ ಬಂಕುರಾ ಜಿಲ್ಲಾ ಆಡಳಿತದ ಅಧಿಕಾರಿಗಳು ತಪ್ಪನ್ನು ತಿದ್ದಿ ಕೊಡುವ ಭರವಸೆಯನ್ನು ನೀಡಿದ್ದಾರೆ.