ಕರಾವಳಿ

ಸುಳ್ಯ: ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶದಲ್ಲಿ ಜಿ ಕೃಷ್ಣಪ್ಪ ಆಕ್ರೋಶಸುಳ್ಯದಲ್ಲಿ ಇಂದು ನಡೆದ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆ ಕಾರ್ಯಕ್ರಮದ ಕುರಿತು ತನಗೆ ಮಾಹಿತಿ ನೀಡಿಲ್ಲವೆಂದು ವಿಧಾನಸಭಾ ಪರಾಜಿತ ಅಭ್ಯರ್ಥಿ ಕೃಷ್ಣಪ್ಪ ಅವರು ಸಮಾವೇಶದ ಆರಂಭದಲ್ಲಿಯೇ ವೇದಿಕೆ ಏರಿ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.

ಸಮಾವೇಶ ಆರಂಭಗೊಂಡು ಸ್ವಾಗತ ಭಾಷಣ ಮಾಡುವ ಸಂದರ್ಭ ಸಭಾಂಗಣದ ಎದುರು ಆಸೀನರಾಗಿದ್ದ ಕೃಷ್ಣಪ್ಪರವರು ಅಲ್ಲಿಂದಲೇ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದುದು ಕಂಡುಬಂತು.

ಸ್ವಲ್ಪ ಹೊತ್ತಿನಲ್ಲಿ ಅವರು ನೇರವಾಗಿ ವೇದಿಕೆಗೆ ಹೋಗಿ ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿಯವರಲ್ಲಿ ಮತ್ತು ಸಚಿವ ದಿನೇಶ್ ಗುಂಡೂರಾವ್ ರವರಲ್ಲಿ ತಾನು ಡಿಫೀಟೆಡ್ ಕ್ಯಾಂಡಿಡೇಟ್ ಅಲ್ವಾ..ನನಗೆ ಕಾರ್ಯಕ್ರಮದ ಬಗ್ಗೆ ಯಾಕೆ ಯಾವ ಮಾಹಿತಿಯೂ ನೀಡಿಲ್ಲ ಎಂದು ಪ್ರಶ್ನಿಸತೊಡಗಿದರು. ಕೆಲ ನಿಮಿಷ ಈ ಹೈಡ್ರಾಮ ನಡೆಯಿತು. ಮಂಜುನಾಥ ಭಂಡಾರಿಯವರು ಅವರನ್ನು ಸಮಾಧಾನಪಡಿಸಿದ ದೃಶ್ಯ ಕಂಡು ಬಂತು.

ಇತರ ಕೆಲವು ನಾಯಕರು ಕೂಡಾ ವೇದಿಕೆಗೆ ತೆರಳಿ ಪಕ್ಕದ ಕೊಠಡಿಗೆ ಅವರನ್ನು ಕರೆದೊಯ್ದರು. ಬಳಿಕ ಕಾರ್ಯಕ್ರಮ ಮುಂದುವರಿಯಿತು. ಸ್ವಲ್ಪ ಹೊತ್ತಿನಲ್ಲಿ ಕೃಷ್ಣಪ್ಪರವರು ಸಮಾವೇಶದ ಎದುರು ಬಂದು ಕುಳಿತರು. ಒಟ್ಟಿನಲ್ಲಿ ಕೆಲಕಾಲ ಹೈಡ್ರಾಮಾ ನಡೆದು ಸಭೆಯಲ್ಲಿ ಕೆಲಕಾಲ ಗೊಂದಲ ಸೃಷ್ಟಿಯಾಯಿತು.

Leave a Reply

Your email address will not be published. Required fields are marked *

error: Content is protected !!