ಜಿಲ್ಲೆ

ಕೊನೆಗೂ ಬೋನಿನಲ್ಲಿ ಸೆರೆಯಾದ ಚಿರತೆ: ನಿಟ್ಟುಸಿರು ಬಿಟ್ಟ ಸ್ಥಳೀಯರು

ಹಲವು ತಿಂಗಳುಗಳಿಂದ ಜನರಿಗೆ ಕಂಟಕವಾಗಿದ್ದ ಚಿರತೆಯೊಂದು ಬೋನಿನಲ್ಲಿ ಬಂಧಿಯಾದ ಘಟನೆ ಹುಣಸೂರು ತಾಲೂಕಿನ ವಡ್ಡಂಬಾಳು ಗ್ರಾಮದಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ

ಹುಣಸೂರು ತಾಲೂಕಿನ ವಡ್ಡಂಬಾಳು ಗ್ರಾಮದಲ್ಲಿ ಜಾನುವಾರುಗಳಿಗೆ ಕಂಟಕವಾಗಿದ್ದ ಹಾಗೂ ಜನರಲ್ಲಿ ಆತಂಕ ಸೃಷ್ಟಿಸಿದ್ದ ಸುಮಾರು 3 ವರ್ಷದ ಹೆಣ್ಣು ಚಿರತೆ ಕೊನೆಗೂ ಬೋನಿನಲ್ಲಿ ಬಂಧಿಯಾಗಿದೆ.

ನಾಗರಹೊಳೆ ಉದ್ಯಾನವನದಂಚಿನ ಲಕ್ಷ್ಮಣ ತೀರ್ಥ ನದಿ ದಾಟಿ ಗ್ರಾಮದತ್ತ ಬರುತ್ತಿದ್ದ ಚಿರತೆಯು ಕೆಲವು ದಿನಗಳಿಂದ ಬೀದಿನಾಯಿ, ಕೋಳಿ, ಜಾನುವಾರುಗಳನ್ನು ಕೊಂದು ಹಾಕುತ್ತಿತ್ತು. ಈ ಬಗ್ಗೆ ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಸ್ಥಳ ಪರಿಶೀಲನೆ ನಡೆಸಿದ ಅರಣ್ಯಾಧಿಕಾರಿಗಳು ಸಿದ್ದರಾಜು ಎಂಬುವರ ಜಮೀನಿನಲ್ಲಿ ಬೋನ್ ಇರಿಸಿ, ನಾಯಿಯೊಂದನ್ನು ಕಟ್ಟಿ ಹಾಕಿದ್ದರು. ಶನಿವಾರ ರಾತ್ರಿ ನಾಯಿ ಬೇಟೆಯಾಡುವ ಆಸೆಯಿಂದ ಬೋನ್ ಹೊಕ್ಕಿದ ಚಿರತೆಯು ಬೋನಿನಲ್ಲಿ ಬಂಧಿಯಾಗಿದೆ.


ಅರಣ್ಯ ಇಲಾಖೆ ಸಿಬ್ಬಂದಿಗಳು ಸೆರೆ ಸಿಕ್ಕ ಚಿರತೆಯನ್ನು ನಾಗರಹೊಳೆ ಉದ್ಯಾನವನದ ಮೇಟಿಕುಪ್ಪೆ ವಲಯಕ್ಕೆ ಸಾಗಿಸಿ ಬಂಧಮುಕ್ತಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!