ಸೌದಿ ಅರೇಬಿಯಾದಲ್ಲಿ 2 ಪ್ರತೇಕ ಅಪಘಾತ: ಕಾರು ಒಂಟೆಗೆ ಡಿಕ್ಕಿ ಹೊಡೆದು ಇಬ್ಬರು ಮಕ್ಕಳು, ಓರ್ವ ಮಹಿಳೆ ಸೇರಿ 8 ಮಂದಿ ದುರ್ಮರಣ
ರಿಯಾದ್: ಸೌದಿ ಅರೇಬಿಯಾದಲ್ಲಿ 2 ಪ್ರತೇಕ ಅಪಘಾತದಲ್ಲಿ ಕಾರು ಒಂಟೆಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು, ಒರ್ವ ಮಹಿಳೆ ಸೇರಿ 8 ಮಂದಿ ದಾರುಣವಾಗಿ ಮೃತಪಟ್ಟ ದಾರುಣ ಘಟನೆ ನಡೆದಿದೆ.

ಮೊದಲ ಪ್ರಕರಣ ರಿಯಾದ್ ಪ್ರಾಂತ್ಯದ ಅಫ್ಲಾಜ್ ನಲ್ಲಿ ಸಂಭವಿಸಿದ್ದು ಅಪಘಾತದಲ್ಲಿ ಐದು ಯುವಕರು ಸಾವನ್ನಪ್ಪಿದ್ದಾರೆ. ಅಲ್ ಅಹ್ಮರ್-ಲೈಲಾ ರಸ್ತೆಯ ಅಫ್ಲಾಜ್ನಿಂದ 30 ಕಿ.ಮೀ ದೂರದಲ್ಲಿ ಈ ಘಟನೆ ನಡೆದಿದೆ.
ಮತ್ತೊಂದು ಪ್ರಕರಣ ಮದೀನಾ ರಸ್ತೆಯಲ್ಲಿ ಸಂಭವಿಸಿದೆ, ಹೆದ್ದಾರಿಯಲ್ಲಿದ್ದ ಒಂಟೆಗಳನ್ನು ತಪ್ಪಿಸಲು ಪ್ರಯತ್ನಿಸುತ್ತಿರುವಾಗ ಕುಟುಂವೊಂದು ಪ್ರಯಾಣಿಸುತ್ತಿದ್ದ ವಾಹನ ಪಲ್ಟಿಯಾದ ಕಾರಣ ಕಾರಲ್ಲಿದ್ದ ಯೆಮೆನ್ ಮೂಲದ ಗರ್ಭಿಣಿ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.
ಯೆಮೆನ್ ಮೂಲದ ಕುಟುಂಬವು ಬಿಶಾದಲ್ಲಿ ಮದುವೆಯಲ್ಲಿ ಭಾಗವಹಿಸಿದ ನಂತರ ಮದೀನಾಕ್ಕೆ ಪ್ರಯಾಣಿಸುತ್ತಿದ್ದರು.