ಜಿಲ್ಲೆ

ಶಕುಂತಳಾ ಶೆಟ್ಟಿ ಆಹ್ವಾನಿಸಿಯೇ ಪೂಜೆಗೆ ಉಪಾಧ್ಯಾಯರು ಬಂದಿದ್ದಾರೆ
ಮಾಹಿತಿ ಕೊರತೆ ಇರುವವರು ರಾಜೀನಾಮೆ ನೀಡಲಿ; ಶೈಲಜಾ ಆಗ್ರಹ


ಪುತ್ತೂರು: ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಆಯುಧ ಪೂಜೆಗೆ ವಿವಾಧಿತ ಪುರೋಹಿತ ಉಪಾಧ್ಯಾಯರನ್ನು ಕರೆಸಿದ್ದೇ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮತ್ತು ಬ್ಲಾಕ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಯವರು ಇವರಿಬ್ಬರಿಗೂ ಉಪಾಧ್ಯಾಯರ ಬಗ್ಗೆ ಮಾಹಿತಿ ಇಲ್ಲದಿದ್ದರೆ ಅದೊಂದು ದೊಡ್ಡ ದುರಂತ ಇವರಿಬ್ಬರು ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದು ರಾಜ್ಯ ಮಹಿಳಾ ಕಾಂಗರೆಸ್ ಪ್ರಧಾನ ಕಾರ್ಯದರ್ಶಿ ಶೈಲಜಾ ಅಮರನಾಥ ಆಗ್ರಹಿಸಿದ್ದಾರೆ.


ಮಾಧ್ಯಮದ ಜೊತೆ ಮಾತನಾಡಿದ ಅವರು ಕರೆದ ಕಾರಣ ಉಪಾಧ್ಯಾಯಯರು ಪೂಜೆಗೆ ಬಂದಿದ್ದಾರೆ, ಪೂಜೆ ಮಾಡಿದವರದ್ದೇನು ತಪ್ಪಿಲ್ಲ ಪೂಜೆ ಮಾಡಿಸಿದವರದ್ದೇ ತಪ್ಪು. ಈ ತಪ್ಪನ್ನು ನಗರ ಕಾಂಗ್ರೆಸ್ ಅಧ್ಯಕ್ಷರಾದ ಮಹಮ್ಮದಾಲಿ ಸಮರ್ಥನೆ ಮಾಡಿಕೊಂಡಿದ್ದಾರೆ.

ಬಿಜೆಪಿಯಿಂದಲೇ ಕಾಂಗ್ರೆಸ್‌ಗೆ ಬಂದಿರುವ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮತ್ತು ಎಂ ಬಿ ವಿಶ್ವನಾಥ ರೈಗಳಿಗೆ ಮೋದಿ ಅಭಿಮಾನಿ, ನಮೋಬ್ರಿಗೇಡ್‌ನಲ್ಲಿರುವ ಕೋಮುವಾದಿ ಉಪಾಧ್ಯಾಯಯರ ಬಗ್ಗೆ ಗೊತ್ತಿಲ್ಲ ಎಂಬುದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ. ಕಾಂಗ್ರೆಸ್‌ನೊಳಗಿರುವ ಸಂಘಪರಿವಾರ ಮನೋಭಾವದವರನ್ನು ದೂರ ಇಡುವಂತೆ ರಾಹುಲ್ ಗಾಂಧಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಪುತ್ತೂರಿನ ಕಾಂಗ್ರೆಸ್‌ನಲ್ಲಿರುವ ಕೋಮುವಾದಿಗಳನ್ನು ಕಾರ್ಯಕರ್ತರು ದೂರ ಮಾಡುವ ಕೆಲಸ ನಡೆಯಬೇಕಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!