ಮತ್ತೊಮ್ಮೆ ಸುದ್ದಿಯಾದ ಸಾನಿಯಾ ಮಿರ್ಜಾ-ಮೊಹಮ್ಮದ್ ಶಮಿ
ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ಮತ್ತು ಮಾಜಿ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರ ವಿಷಯ ಈಗ ಮತ್ತೊಮ್ಮೆ ಸುದ್ದಿಯಾಗಿದೆ.

ಇಬ್ಬರೂ ದುಬೈನಲ್ಲಿ ಜ್ವಾಲಿ ಮೂಡ್ ನಲ್ಲಿ ಜೊತೆಗಿರುವ, ಕ್ರಿಸ್‌ಮಸ್ ಆಚರಣೆ ಮಾಡುತ್ತಿರುವ ಫೋಟೊಗಳು ವ್ಯಾಪಕವಾಗಿ ವೈರಲ್ ಆಗುತ್ತಿವೆ. ಇಬ್ಬರು ಅನ್ಯೋನ್ಯವಾಗಿ ಜೊತೆಗಿರುವಂತೆ ಕಾಣುವ ಫೋಟೊಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದ್ದು ಇದನ್ನು ನೋಡಿದವರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ಖ್ಯಾತ ಕ್ರಿಕೆಟಿಗ ಶೋಯೆಬ್ ಮಲಿಕ್ ಜೊತೆ ಮದುವೆಯಾಗಿದ್ದ ಸಾನಿಯಾ ಮಿರ್ಜಾ ಸದ್ಯ ಡಿವೋರ್ಸ್ ಪಡೆದಿದ್ದು ಮಗನ ಜೊತೆ ದುಬೈನಲ್ಲಿ ನೆಲೆಸಿದ್ದಾರೆ. ಮೊಹಮ್ಮದ್ ಶಮಿ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು ವಿಶ್ರಾಂತಿ ಪಡೆಯುತ್ತಿರುವ ಕಾರಣ ಇಬ್ಬರು ದುಬೈನಲ್ಲಿ ಸಮಯ ಕಳೆದಿದ್ದಾರೆ ಎನ್ನುವಂತೆ ಫೋಟೊಗಳಲ್ಲಿ ತೋರಿಸಲಾಗಿದೆ.
ಆದರೆ ಈ ಫೋಟೊಗಳು ಅಸಲಿಯಲ್ಲ, ಎಐ ತಂತ್ರಜ್ಞಾನವನ್ನು ಬಳಸಿಕೊಂಡು ಈ ಚಿತ್ರಗಳನ್ನು ಸೃಷ್ಟಿಸಲಾಗಿದೆ. ಇಬ್ಬರು ಕ್ರಿಸ್‌ಮಸ್ ಆಚರಣೆ ಮಾಡಿರುವುದಾಗಲಿ, ಜೊತೆಗಿರುವುದಾಗಲಿ ಎಲ್ಲವೂ ಅಪ್ಪಟ ಸುಳ್ಳು ಎಂದು ತಿಳಿದು ಬಂದಿದೆ.
ಈ ಫೋಟೊಗಳ ಬಗ್ಗೆ ಸಾನಿಯಾ ಮಿರ್ಜಾ ಆಗಲಿ ಮೊಹಮ್ಮದ್ ಶಮಿ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸದ್ಯ ಇಬ್ಬರು ಕೂಡ ತಮ್ಮ ತಮ್ಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು ವೃತ್ತಿ ಜೀವನದ ಕಡೆ ಗಮನ ಹರಿಸಿದ್ದಾರೆ.