ಇರುವೆ ಕಚ್ಚಿ ಮೂರು ವರ್ಷದ ಪುಟಾಣಿ ಮೃತ್ಯು
ಕೆಂಪು ಇರುವೆ ಕಚ್ಚಿದ ಎರಡು ಗಂಟೆಯೊಳಗೆ ಮೂರು ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಬಗೇಶ್ವರದಲ್ಲಿ ನಡೆದಿದೆ.
ಬಗೇಶ್ವರದ ಪೌಸಾರಿ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದೆ.
ಭೂಪೇಶ್ ರಾಮ್ ಎಂಬವರ ಮಕ್ಕಳಾದ ಐದು ವರ್ಷದ ಪ್ರಿಯಾಂಶು ಮತ್ತು ಮೂರು ವರ್ಷದ ಸಾಗರ್ ಮೈದಾನದಲ್ಲಿ ಆಡುತ್ತಿದ್ದಾಗ ಕೆಂಪು ಇರುವೆ ಇಬ್ಬರಿಗೂ ಕಚ್ಚಿತ್ತು. ತಕ್ಷಣವೇ ಇಬ್ಬರ ಆರೋಗ್ಯ ಸ್ಥಿತಿ ಹದಗೆಡಲಾರಂಭಿಸಿತು ಹಾಗೂ ಇಬ್ಬರನ್ನೂ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸಾಗರ್ ಮಾರ್ಗದ ಮಧ್ಯದಲ್ಲಿ ಮೃತಪಟ್ಟರೆ, ಚಿಕಿತ್ಸೆಯಿಂದ ಚೇತರಿಸಿಕೊಂಡ ಪ್ರಿಯಾಂಶುವನ್ನು ಮರುದಿನ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು ಎಂದು ವರದಿಯಾಗಿದೆ.